ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯೆಷ್ಟಿದೆ ಗೊತ್ತಾ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
2022-23ರ ಹಣಕಾಸು ವರ್ಷದಲ್ಲಿ ಎಪ್ರಿಲ್‌-ಜೂನ್‌ ತ್ರೈಮಾಸಿಕದಲ್ಲಿ ಭಾರತದ ಒಟ್ಟೂ ಆಂತರಿಕ ಉತ್ಪನ್ನ (ಜಿಡಿಪಿ) 13.5ರಷ್ಟು ಬೆಳವಣಿಗೆಯಾಗಿದೆ. ಬುಧವಾರ ರಾಷ್ಟ್ರೀಯ ಅಂಕಿ ಅಂಶ ಕಚೇರಿ ಬಿಡುಗಡೆ ಮಾಡಿದ ವರದಿಯು ಈ ಮಾಹಿತಿಯನ್ನು ಹೊರಹಾಕಿದೆ.

ದತ್ತಾಂಶದ ಪ್ರಕಾರ 2022-23 ರಲ್ಲಿನ ಮೊದಲ ತ್ರೈಮಾಸಿಕದ ನೈಜ ಜಿಡಿಪಿಯು 36.85 ಲಕ್ಷ ಕೋಟಿ ರೂಪಾಯಿಗಳ ಮಟ್ಟ ತಲುಪುತ್ತದೆ ಎಂದು ಅಂದಾಜಿಸಲಾಗಿದೆ. ಇದು 2021-22ರ ಇದೇ ಅವಧಿಯಲ್ಲಿ 32.46 ಲಕ್ಷ ಕೋಟಿ ರೂ. ಗಳಷ್ಟಿತ್ತು.

ಆದಾಗ್ಯೂ, ಈ ದತ್ತಾಂಶವು ಭಾರತೀಯ ರಿಸರ್ವ್ ಬ್ಯಾಂಕ್ (RBI)ನ ನಿರೀಕ್ಷಿತ ಮಟ್ಟವನ್ನು ತಲುಪಿಲ್ಲ ಎನ್ನಲಾಗಿದೆ. ಈ ತಿಂಗಳ ಆರಂಭದಲ್ಲಿ ನಡೆದ ಆರ್‌ಬಿಐ ವಿತ್ತೀಯ ನೀತಿ ಸಭೆಯಲ್ಲಿ, ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಬೆಳವಣಿಗೆ ದರವು 16.2 ಶೇ. ತಲುಪುತ್ತದೆ ಎಂದು ಅಂದಾಜಿಸಲಾಗಿತ್ತು.

2021 ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ, GDP ಬೆಳವಣಿಗೆ ದರವು 20.1 ಶೇಕಡಾ ದಷ್ಟಿತ್ತು.

2022-23 ಮೊದಲ ತ್ರೈಮಾಸಿಕದಲ್ಲಿ,  ಪ್ರಸ್ತುತ ಬೆಲೆಗಳಲ್ಲಿ ನಾಮಮಾತ್ರ ಜಿಡಿಪಿಯು 64.95 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ, ಇದು 2021-22 ರಲ್ಲಿ 51.27 ಲಕ್ಷ ಕೋಟಿ ರೂ.ಗಳಷ್ಟಿತ್ತು. 2021ರಲ್ಲಿ 32.4 ಶೇಕಡಾಕ್ಕೆ ಹೋಲಿಸಿದರೆ ಇದು 26.7 ಶೇಕಡಾ ಬೆಳವಣಿಗೆಯನ್ನು ತೋರಿಸುತ್ತದೆ.

ಅಂಕಿಅಂಶಗಳ ಪ್ರಕಾರ ಕೃಷಿ ವಲಯವು ವರ್ಷದಿಂದ ವರ್ಷಕ್ಕೆ 4.5 ಪ್ರತಿಶತ  ಬೆಳವಣಿಗೆಯನ್ನು ಕಂಡಿದೆ. ಉತ್ಪಾದನಾ ವಲಯವು, ಒಂದು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ 4.9 ಶೇಕಡಾಗೆ ಹೋಲಿಸಿದರೆ 4.8 ಶೇಕಡಾದಷ್ಟು ಬೆಳೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!