Wednesday, October 5, 2022

Latest Posts

ಜಸ್ಟ್‌ ಮಿಸ್‌!! ವ್ಯಕ್ತಿ ಬಚಾವ್‌, ಬೈಕ್‌ ಪೀಸ್‌ ಪೀಸ್:‌ ರೈಲು ಹಳಿ ದಾಟುವ ಮುನ್ನ ಈ ವಿಡಿಯೋ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರೈಲು ಅಪಘಾತದಿಂದ ವ್ಯಕ್ತಿಯೊಬ್ಬರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಇತ್ತೀಚೆಗೆ ನಡೆದ ಈ ಘಟನೆಗೆ ಸಂಬಂಧಿಸಿದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಉತ್ತರ ಪ್ರದೇಶದ ಇಟಾವಾದಲ್ಲಿರುವ ರೈಲ್ವೇ ಕ್ರಾಸಿಂಗ್‌ನಲ್ಲಿ ಈ ಘಟನೆ ನಡೆದಿದೆ. ಎರಡು ರೈಲು ಹಳಿಗಳಿದ್ದು ಒಂದರ ಮೇಲು ರೈಲು ಪಾಸಾಗುತ್ತಿದೆ. ಅದರ ಹತ್ತಿರ ಹೋದ ಕೆಲ ಬೈಕ್‌ ಸವಾರರು ಇನ್ನೊಂದು ಹಳಿ ಮೇಲೆ ಬರುತ್ತಿದ್ದ ರೈಲನ್ನು ತಡವಾಗಿ ಗಮನಿಸಿದ್ದಾರೆ.

ವಾಪಸ್‌ ಬರುವಲ್ಲಿ ಕೆಲವುರ ಯಶಸ್ವಿಯಾದರು ಆದರೆ ಓರ್ವ ವ್ಯಕ್ತಿ ಬೈಕ್‌ ಯೂ ಟರ್ನ್‌ ಮಾಡಲಾಗದೆ ಪರದಾಡಿದರು. ಬೈಕ್‌ ಹಳಿಗೆ ಸಿಕ್ಕಿಹಾಕಿಕೊಂಡಿದೆ. ಎತ್ತಲಾಗದೆ ವ್ಯಕ್ತಿ ಹರಸಾಹಸ ಪಟ್ಟಿದ್ದಾರೆ. ರೈಲು ಹತ್ತಿರ ಬರುತ್ತಿದ್ದಂತೆ ಆತ ಓಡಿ ಬಂದಿದ್ದಾರೆ. ಆದರೆ ಬೈಕ್‌ ಮಾತ್ರ ರೈಲಿಗೆ ಸಿಕ್ಕಿ ಪೀಸ್‌ ಪೀಸ್‌ ಆಗಿದೆ. ರೈಲು ಹಳಿ ದಾಟುವಾಗ ಎಚ್ಚರವಿರಲಿ ಎಂದು ಬೋರ್ಡ್‌ ಹಾಕಿದ್ದರೂ ಸಹ ಕೆಲವರು ನಿರ್ಲಕ್ಷ್ಯದಿಂದ ಅಪಘಾತಕ್ಕೆ ಕಾರಣರಾಗುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!