ಟ್ವಿಟರ್​ನಿಂದ ವಜಾಗೊಂಡ ಪರಾಗ್ ಅಗರ್​ವಾಲ್ ಗೆ ಸಿಕ್ಕ ಪರಿಹಾರ ಮೊತ್ತ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್​ ಅನ್ನು ಸಂಪೂರ್ಣವಾಗಿ ತಮ್ಮ ಸುಪರ್ದಿಗೆ ತೆಗೆದುಕೊಂಡ ಬೆನ್ನಲ್ಲೇ, ಸಿಇಒ ಪರಾಗ್ ಅಗರ್​ವಾಲ್ ಸೇರಿದಂತೆ ಹಲವರನ್ನು ವಜಾ ಮಾಡಿದ್ದಾರೆ.
ಆದರೆ ಪರಾಗ್ ಅಗರ್​ವಾಲ್ ಅವರಿಗೆ ಒಪ್ಪಂದದ ಪ್ರಕಾರ ಪರಿಹಾರದ ಮೊತ್ತ ನೀಡಬೇಕಿದ್ದು, ಹಾಗೆಯೇ ಕಳುಹಿಸಿಕೊಡುವಂತಿಲ್ಲ.
ಇದರ ಪ್ರಕಾರ ಅಂದಾಜು 42 ದಶಲಕ್ಷ ಡಾಲರ್, ಅಂದರೆ ಸುಮಾರು 346 ಕೋಟಿ ರೂ. ಪರಿಹಾರವಾಗಿ ಪರಾಗ್ ಅಗರ್​ವಾಲ್ ಪಡೆಯಲಿದ್ದಾರೆ. ಇದರಲ್ಲಿ ವರ್ಷದ ಮೂಲ ವೇತನ, ಎಲ್ಲ ಈಕ್ವಿಟಿ ಅವಾರ್ಡ್​ಗಳು ಸೇರಿರಲಿವೆ ಎಂದು ‘ರಾಯಿಟರ್ಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.
ಅಗರ್​ವಾಲ್​ ಅವರಿಗೆ 2021ರ ಪರಿಹಾರವಾಗಿ 30.4 ದಶಲಕ್ಷ ಡಾಲರ್ (ಅಂದಾಜು 250 ಕೋಟಿ ರೂ.) ನೀಡಬೇಕಿದೆ. ಸಿಇಒ ಆಗಿ ಅಗರ್​ವಾಲ್ ವೇತನ ವಾರ್ಷಿಕ 1 ದಶಲಕ್ಷ ಡಾಲರ್ (ಸುಮಾರು 8.24 ಕೋಟಿ ರೂ.) ಇದೆ ಎಂದು ವರದಿ ಉಲ್ಲೇಖಿಸಿದೆ.

ಕಳೆದ ವರ್ಷ ನವೆಂಬರ್​ನಲ್ಲಿ ಪರಾಗ್ ಅಗರ್​ವಾಲ್​ ಟ್ವಿಟರ್​ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಇಒ) ಅಧಿಕಾರ ಸ್ವೀಕರಿಸಿದ್ದರು. ಆದರೆ, ಮಸ್ಕ್ ಅವರು ಕಂಪನಿಯನ್ನು ಖರೀದಿಸುತ್ತಿದ್ದಂತೆಯೇ ಅಗರವಾಲ್ ಸ್ಥಾನಕ್ಕೆ ಕುತ್ತುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!