ಅದಾನಿ ಗ್ರೂಪ್‌ ನ ಈಗಿನ ಮಾರುಕಟ್ಟೆ ಬಂಡವಾಳವೆಷ್ಟು ಗೊತ್ತಾ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಹೊಸ ಹೊಸ ದಾಖಲೆ ಬರೆಯುತ್ತಿರುವ ಅದಾನಿ ಗುಪ್‌ ನ ಮಾರುಕಟ್ಟೆ ಬಂಡವಾಳವು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದ್ದು ಪ್ರಸ್ತುತ ಅದಾನಿ ಗ್ರುಪ್‌ ನ ಸಂಯೋಜಿತ ಮಾರುಕಟ್ಟೆ ಬಂಡವಾಳವು 200 ಬಿಲಿಯನ್ ಡಾಲರ್‌ ಅನ್ನು ದಾಟಿದೆ.

ಈ ಕುರಿತು ಅದಾನಿ ಸಮೂಹದ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ವ್ಯಾಪಾರ ಸಮೂಹದ ಅಧ್ಯಕ್ಷ ಗೌತಮ್ ಅದಾನಿ “ನಮ್ಮ ಸಂಯೋಜಿತ ಸಮೂಹ ಮಾರುಕಟ್ಟೆ ಬಂಡವಾಳವು ಈ ವರ್ಷ 200ಬಿಲಿಯನ್‌ ಯುಎಸ್‌ ಡಾಲರ್‌ ಮೀರಿದೆ. ಅಂತರಾಷ್ಟ್ರೀಯ ಮಾರುಕಟ್ಟೆಗಳಿಂದ ಬಿಲಿಯನ್‌ ಡಾಲರ್‌ ಬಂಡವಾಳ ಸಂಗ್ರಹಿಸಲು ನಾವು ಸಫಲವಾಗಿದ್ದೇವೆ. ಹಲವಾರು ವಿದೇಶಿ ಸರ್ಕಾರಗಳು ಈಗ ತಮ್ಮ ಭೌಗೋಳಿಕತೆಯಲ್ಲಿ ಕೆಲಸ ಮಾಡಲು ಆಹ್ವಾನ ನೀಡುತ್ತಿವೆ. ಭಾರತದ ಬೆಳವಣಿಗೆಯಲ್ಲಿನ ನಂಬಿಕೆಯು ಗ್ರುಪ್‌ ಬೆಳಯಲು ಸಹಾಯ ಮಾಡಿದೆ. ಮುಂಬರುವ ವರ್ಷದಲ್ಲಿ ನಾವು ಭಾರತದ ಗಡಿಗಳನ್ನು ಮೀರಿ ವಿಶಾಲವಾದ ವಿಸ್ತರಣೆಯನ್ನು ಪಡೆಯಲು ಅಡಿಪಾಯ ಹಾಕಿದ್ದೇವೆ” ಎಂದು ಹೇಳಿದ್ದಾರೆ.

ಡೇಟಾ ಸೆಂಟರ್, ಡಿಜಿಟಲ್ ಸೂಪರ್ ಅಪ್ಲಿಕೇಶನ್‌ಗಳು, ಕೈಗಾರಿಕೆ, ರಕ್ಷಣಾ ಕ್ಷೇತ್ರ, ಬಂದರುಗಳು, ಲಾಜಿಸ್ಟಿಕ್ಸ್, ಪ್ರಸರಣ ಮತ್ತು ವಿತರಣೆ, ನಗರ ಅನಿಲ ಮತ್ತು ಪೈಪ್ಡ್ ನೈಸರ್ಗಿಕ ಅನಿಲದಂತಹ ವ್ಯವಹಾರದಲ್ಲಿ ಅದಾನಿ ಗುಪ್‌ ಈಗಾಗಲೇ ತನ್ನ ಹೆಸರು ಛಾಪಿಸಿದೆ. ಇದಲ್ಲದೇ ಟೆಲಿಕಾಂ ಕ್ಷೇತ್ರಕ್ಕೂ ಪ್ರವೇಶಿಸಲು ಕಂಪನಿ ಮುಂದಾಗಿದ್ದು ಪ್ರಸ್ತುತ ನಡೆಯುತ್ತಿರುವ 5G ತರಂಗಾಂತರ ಹರಾಜು ಪ್ರಕ್ರಿಯೆಯಲ್ಲಿನ ನಿರ್ಣಾಯಕ ಆಟಗಾರರ ಪೈಕಿ ಅದಾನಿ ಗ್ರುಪ್‌ ಹೆಸರೂ ಕೇಳಿಬಂದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!