Tuesday, March 28, 2023

Latest Posts

ಯಶ್ ತನ್ನ ಮಡದಿಗೆ ಕೊಟ್ಟ ಮೊದಲ ಗಿಫ್ಟ್ ಏನು ಗೊತ್ತಾ? ಫೋಟೋ ಶೇರ್ ಮಾಡಿದ ರಾಧಿಕಾ ಪಂಡಿತ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕನ್ನಡದ ಸ್ಟಾರ್ ಹೀರೋ ಯಶ್ ಕೆಜಿಎಫ್ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಕ್ರೇಜ್ ಗಳಿಸಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಧಾರಾವಾಹಿಗಳಿಂದ ಪಯಣ ಆರಂಭಿಸಿ, ಸಣ್ಣ ಚಿತ್ರಗಳನ್ನು ಮಾಡಿ ಈಗ ಸ್ಟಾರ್ ಹೀರೋ ಆಗಿದ್ದಾರೆ. ಯಶ್ ಕನ್ನಡದ ನಾಯಕಿ ರಾಧಿಕಾ ಪಂಡಿತ್ ಅವರನ್ನು ಪ್ರೀತಿಸಿ 2016ರಲ್ಲಿ ಮದುವೆಯಾದರು.

ಮದುವೆಯ ನಂತರ ರಾಧಿಕಾ ಪಂಡಿತ್ ತಮ್ಮ ಕೌಟುಂಬಿಕ ಜೀವನವನ್ನು ಆನಂದಿಸುತ್ತಿದ್ದಾರೆ. ಇತ್ತೀಚೆಗಷ್ಟೇ ರಾಧಿಕಾ ತಮ್ಮ ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಚಿಟ್ ಚಾಟ್ ಮಾಡಿದ್ದರು. ಅಭಿಮಾನಿಗಳು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಯಶ್ ಸರ್ ಅವರಿಂದ ನೀವು ಪಡೆದ ಮೊದಲ ಉಡುಗೊರೆ ಯಾವುದು ಎಂದು ಅಭಿಮಾನಿಯೊಬ್ಬರ ಪ್ರಶ್ನೆಗೆ ರಾಧಿಕಾ ಫೋಟೋ ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ರಾಧಿಕಾಗೆ ಯಶ್ ಕೊತ್ತಂಬರಿ ಸೊಪ್ಪನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ.

ರಾಧಿಕಾ ಈ ಫೋಟೋವನ್ನು ಹಂಚಿಕೊಂಡಿದ್ದು, “ದಿ ಮೋಸ್ಟ್ ಲವ್ಲಿ ಬಂಚ್ ಆಫ್ ಫ್ರೆಶ್” ಎಂದು ಕಾಮೆಂಟ್ ಮಾಡಿದ್ದಾರೆ. ಆ ಫೋಟೋದಲ್ಲಿ ಕೊತ್ತಂಬರಿ ಸೊಪ್ಪಿನ ಕಟ್ಟು ಕಂಡು ಎಲ್ಲರೂ ಅಚ್ಚರಿಗೊಂಡು ನಗುತ್ತಿದ್ದಾರೆ. ಇದೀಗ ಈ ಫೋಟೋವನ್ನು ರಾಧಿಕಾ ಶೇರ್ ಮಾಡಿದ್ದಾರಂತೆ ಇದು ವೈರಲ್ ಆಗಿದೆ. ಸದ್ಯ ಯಶ್ ಮತ್ತು ರಾಧಿಕಾ ಇಬ್ಬರು ಮಕ್ಕಳೊಂದಿಗೆ ಹ್ಯಾಪಿ ಫ್ಯಾಮಿಲಿ ಲೈಫ್ ಲೀಡ್ ಮಾಡುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!