ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ಗಂಡುಮಕ್ಕಳು ಹಣವನ್ನು ತಮ್ಮ ಪರ್ಸ್‌ನಲ್ಲಿಟ್ಟು, ಅದನ್ನು ಹಿಂಬದಿ ಪ್ಯಾಂಟ್‌ನಲ್ಲಿಡುವುದು ರೂಢಿಸಿಕೊಂಡಿರುತ್ತಾರೆ. ಒಂದು ವೇಳೆ ಅಂತಹ ಅಭ್ಯಾಸ ಇದ್ದರೆ, ಇಂದೇ ಬಿಟ್ಟು ಬಿಡಿ. ಆರೋಗ್ಯ ಸಮಸ್ಯೆಯ ಜೊತೆ ವಯಸ್ಸಾದ ಮೇಲೆ ಸರಿಯಾಗಿ ನಡೆಯಲು ಸಾಧ್ಯವಾಗುವುದಿಲ್ಲ ಎಂಬುದು ಕೂಡ ಕಾರಣ. ಪ್ಯಾಂಟ್ ನ ಹಿಂಬದಿಯ ಜೇಬಿನಲ್ಲಿ ವ್ಯಾಲೆಟ್ ಅನ್ನು ಹೆಚ್ಚು ಹೊತ್ತು ಇಟ್ಟುಕೊಳ್ಳುವುದರಿಂದ “ಫ್ಯಾಟ್ ವಾಲೆಟ್ ಸಿಂಡ್ರೋಮ್” ಸಮಸ್ಯೆ ಬರಬಹುದೆಂದು ತಜ್ಞರು ಎಚ್ಚರಿಸಿದ್ದಾರೆ.
ಅನೇಕರು ಸಾಮಾನ್ಯವಾಗಿ ಕುತ್ತಿಗೆ, ಭುಜ ಮತ್ತು ಬೆನ್ನು ಸಮಸ್ಯೆಗಳನ್ನು ಎದುರಿಸುತ್ತಾರೆ. ಹಿಂಬದಿಯ ಜೇಬಿನಲ್ಲಿ ಪರ್ಸ್ ಇಟ್ಟಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಭಾರವಾದ ವಾಲೆಟ್ ತಂದು ಹಿಂಬದಿಯ ಜೇಬಿಗೆ ಹಾಕಿಕೊಳ್ಳುವುದರಿಂದ ಆ ತೂಕದಿಂದಾಗಿ ಸ್ನಾಯುಗಳು ಮತ್ತು ಸ್ನಾಯುರಜ್ಜುಗಳ ಮೇಲೆ ತಿಳಿಯದೆ ಒತ್ತಡ ಬೀಳಬಹುದು. ಪರಿಣಾಮವಾಗಿ, ಇದು ದೀರ್ಘಕಾಲದ ಕೀಲು ನೋವಿಗೆ ಕಾರಣವಾಗಬಹುದು.
ವ್ಯಾಲೆಟ್ ನಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ವೋಚರ್, ಆಧಾರ್ ಕಾರ್ಡ್ ಹೀಗೆ ಹಲವು ಕಾರ್ಡ್ ಗಳನ್ನು ಹೊತ್ತುಕೊಂಡು ಭಾರವಾಗುತ್ತದೆ. ಇದನ್ನು ನಮ್ಮ ಹಿಂಬದಿಯ ಜೇಬಿಗೆ ಹಾಕುವುದರಿಂದ ಸೊಂಟದ ಮೂಳೆಯ ಸ್ನಾಯುಗಳು ಮತ್ತು ಕೀಲುಗಳು ಒತ್ತಡಕ್ಕೆ ಒಳಗಾಗುತ್ತವೆ. ಹೆಚ್ಚು ಭಾರವನ್ನು ಹೊತ್ತುಕೊಂಡಷ್ಟೂ ಒಂದು ಬದಿಗೆ ವಾಲುವುದು ಸಹಜ. ನಮಗೆ ತಿಳಿಯದೆ ನಮ್ಮ ನಡೆ ವಕ್ರವಾಗುತ್ತದೆ. ಇದು ಬೆನ್ನು, ಸೊಂಟ, ಕಾಲುಗಳು ಮತ್ತು ಭುಜಗಳಲ್ಲಿ ನೋವನ್ನು ಉಂಟುಮಾಡುತ್ತದೆ.
ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಕಾರ್ಡ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿ. ಪಂಚ್ ಕಾರ್ಡ್‌ಗಳು, ವ್ಯಾಪಾರ ಕಾರ್ಡ್‌ಗಳು, ರಿವಾರ್ಡ್ ಕಾರ್ಡ್‌ಗಳು ಇತ್ಯಾದಿ ಕಾರ್ಡ್‌ಗಳನ್ನು ಒಯ್ಯುವುದನ್ನು ಕಡಿಮೆ ಮಾಡಲು ಪ್ರಯತ್ನಿಸಿ. ವ್ಯಾಲೆಟ್ ಅಥವಾ ಪರ್ಸ್‌ನಲ್ಲಿರುವ ಕಾರ್ಡ್‌ಗಳ ಸಂಖ್ಯೆಯನ್ನು ಸಾಧ್ಯವಾದಷ್ಟು ಮಿತಿಗೊಳಿಸಿ. ಇದರಿಂದ ತೂಕ ಕಡಿಮೆಯಾಗಿ ಬೆನ್ನು, ಕತ್ತು, ಭುಜ, ಕಾಲಿನ ಸಮಸ್ಯೆ ದೂರವಾಗುತ್ತದೆ.