ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಾಲ್‌ಬಾಗ್‌ನಲ್ಲಿ ನಡೆದ ಈ ವರ್ಷದ ಮೊದಲ ಫ್ಲವರ್ ಶೋ ಮುಕ್ತಾಯವಾಗಿದೆ.
ಬಸವಣ್ಣನವರ ಜೀವನಾಧರಿತ ಥೀಮ್‌ನ ಜೊತೆ ಬಣ್ಣ ಬಣ್ಣದ ಹೂವುಗಳಿಂದ ಕಂಗೊಳಿಸಿದ್ದ ಫ್ಲವರ್ ಶೋ ಮುಕ್ತಾಯವಾಗುದ್ದು, ಒಟ್ಟಾರೆ 2.59 ಕೋಟಿ ರೂಪಾಯಿ ಆದಾಯ ಗಳಿಸಿದೆ.
ಮಕ್ಕಳು, ವೃದ್ಧರು ಎನ್ನದೇ ಎಲ್ಲರೂ ಈ ಬಾರಿ ಫ್ಲವರ್ ಶೋ ಎಂಜಾಯ್ ಮಾಡಿದ್ದಾರೆ. ವಿಧವಿಧದ ಹೂವುಗಳು, ಹಿಂದೆಂದೂ ನೋಡಿರದ ವಿನ್ಯಾಸ ಕಣ್ಮನಸೂರೆಗೊಳಿಸುವಂತಿತ್ತು. ಉರಿಬಿಸಿಲನ್ನೂ ಲೆಕ್ಕಿಸದೆ ಜನ ಫ್ಲವರ್ ಶೋಗೆ ಆಗಮಿಸಿದ್ದಾರೆ.
ಒಟ್ಟಾರೆ ಐದು ಲಕ್ಷ ಮಂದಿ ಫ್ಲವರ್ ಶೋ ಕಣ್ತುಂಬಿಕೊಂಡಿದ್ದಾರೆ. ವೀಕೆಂಡ್‌ನಲ್ಲಿ ನೂರು ರೂಪಾಯಿ ಹಾಗೂ ಮಾಮೂಲಿ ದಿನಗಳಲ್ಲಿ 70 ರೂಪಾಯಿ ಟಿಕೆಟ್ ಬೆಲೆ ನಿಗಡಿ ಮಾಡಲಾಗಿತ್ತು. ಗ್ಲಾಸ್‌ಹೌಸ್‌ನಲ್ಲಿ ಬಣ್ಣ ಬಣ್ಣದ ಹೂವುಗಳು, ಆರ್ಕಿಡ್ಸ್ ಜೊತೆ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಪ್ರತಿರೂಪ ಅರಳಿದ್ದವು. ದೇಶಗಳಿಂದಲೂ ಜನ ಇಲ್ಲಿಗೆ ಆಗಮಿಸಿದ್ದಾರೆ.
68 ಬಗೆಯ 32 ಲಕ್ಷ ಹೂವುಗಳನ್ನು ಬಳಕೆ ಮಾಡಿ ತಯಾರಾಗಿದ್ದ ಶೋ 11 ದಿನ ನಡೆದಿದೆ. ಜನವರಿ 26 ರಂದು ರಜೆ ಇದ್ದ ಕಾರಣ ಒಂದೇ ದಿನ 97,000 ಮಂದಿ ಲಾಲ್‌ಬಾಗ್‌ಗೆ ಭೇಟಿ ನೀಡಿದ್ದಾರೆ. ಇನ್ನು ಕಡೆಯ ದಿನವಾದ ಭಾನುವಾರ ಒಟ್ಟಾರೆ 75,500 ಮಂದಿ ಭೇಟಿ ನೀಡಿದ್ದಾರೆ.
ಭಾರೀ ರಶ್ ನಡುವೆಯೂ ಹೂವುಗಳ ಜೊತೆ ಜನರು ಫೋಟೊ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದು, ಈ ಸ್ವಾತಂತ್ರ್ಯ ದಿನಾಚರಣೆಗೆ ಮತ್ತೊಂದು ಫ್ಲವರ್ ಶೋ ಇದೆಯಾ? ಕಾದು ನೋಡಬೇಕಿದೆ…