September 5, 2026
Saturday, September 5, 2026
spot_img

ಮೆಟ್ರೋ ರೈಲಿನ ಬಾಗಿಲಿಗೆ ಫೋನ್‌ ಅಂಟಿಸುವ ಕಂಟೆಂಟ್‌ ಕ್ರಿಯೇಟರ್‌ಗಳ ರಿಯಾಲಿಟಿ ಏನು ಗೊತ್ತಾ? ವಿಡಿಯೋ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಬ್ಲಿಕ್‌ ಪ್ಲೇಸ್‌ಗಳಲ್ಲಿ ಸೆಲ್ಫಿ ತಗೊಳೋದಕ್ಕೆ ನಾಚಿಕೆ ಪಡುವ ಜನ ಒಂದುಕಡೆಯಾದ್ರೆ ಪಬ್ಲಿಕ್‌ ಜಾಗ ಸಿಕ್ಕರೆ ಅಟೆಂಶನ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯೂಸ್‌ಗಾಗಿ ವಿಡಿಯೋ ಮಾಡೋರು ಇನ್ನೊಂದು ಕಡೆ. ಈಗೆಲ್ಲಾ ಮೆಟ್ರೋ ರೈಲಿನ ಕಿಟಕಿಗಳಿಗೆ ಫೋನ್‌ ಅಂಟಿಸಿ ನಂತರ ನಿಂತು ವಿಡಿಯೋ ಮಾಡಿಕೊಳ್ಳೋದು ಟ್ರೆಂಡ್‌ ಆಗಿದೆ. ಈ ಟ್ರೆಂಡ್‌ ಬಳಸಿ ಇನ್ಫ್ಲೂಯೆನ್ಸರ್‌ಗಳು ಜನರನ್ನು ಹೇಗೆ ಬಕ್ರಾ ಮಾಡ್ತಿದ್ದಾರೆ ತಿಳಿದುಕೊಳ್ಳಿ.

ಏನಿದು ಟ್ರೆಂಡ್‌?

ಸಾಮಾಜಿಕ ಜಾಲತಾಣದಲ್ಲಿ ವ್ಯೂಸ್‌ಗಾಗಿ ಏನೇನೋ ಟ್ರೆಂಡ್‌ಗಳನ್ನು ಸೃಷ್ಟಿ ಮಾಡಲಾಗುತ್ತದೆ. ಇದರಲ್ಲಿ ಮೆಟ್ರೋ ಬಾಗಿಲಿಗೆ ಫೋನ್‌ ಅಂಟಿಸಿ ಡ್ಯಾನ್ಸ್‌ ಮಾಡುವುದು ಸದ್ಯದ ಟ್ರೆಂಡ್‌. ಯುವತಿಯೊಬ್ಬಳು ಫೋನ್‌ನ್ನು ಮೆಟ್ರೋ ಕಿಟಕಿಗೆ ಸಿಕ್ಕಿಸಿಕೊಳ್ಳುತ್ತಾಳೆ. ಆನಂತರ ಡ್ಯಾನ್ಸ್‌ ಅಥವಾ ಇನ್ನೇನೋ ಮಾಡುತ್ತಾರೆ. ಮೆಟ್ರೋ ಓಡುವಂತೆ ಅವರೂ ಕೂಡ ಓಡುತ್ತಾರೆ. ಆನಂತರ ಮೆಟ್ರೋ ಸ್ಪೀಡ್‌ ಹೆಚ್ಚಾಗುತ್ತದೆ. ಫೋನ್‌ ಮೆಟ್ರೋ ಜೊತೆ ಹೋಗಿಬಿಡ್ತು. ಮೆಟ್ರೋ ವೇಗಕ್ಕೆ ಬಿದ್ದುಹೋಯ್ತಾ ಅಥವಾ ಬೇರೆ ಸ್ಟೇಷನ್‌ನಲ್ಲಿ ಇನ್ಯಾರೋ ತಗೊಂಡಿದ್ದಾರೇನೋ ಎನಿಸುವಂತೆ ಕಾಣಿಸುತ್ತದೆ. ಆದರೆ ರಿಯಾಲಿಟಿ ಬೇರೇನೇ ಇದೆ.

ರಿಯಾಲಿಟಿ ಏನು?

ಫೋನ್‌ ಸಿಕ್ಕಿಸಿಕೊಂಡು ಡ್ಯಾನ್ಸ್‌ ಮಾಡುತ್ತಾ ಎಡವಟ್ಟು ಮಾಡಿಕೊಂಡು ಫೋನ್‌ ಕಳೆದು ಹೋಯ್ತು ಅಥವಾ ಫೋನ್‌ ಬಿದ್ದು ಹೋಯ್ತು ಎನ್ನುವಂತೆ ಇನ್ಫ್ಲುಯೆನ್ಸರ್ಸ್‌ ನಟಿಸುತ್ತಾರೆ ಅಷ್ಟೇ! ಯುವತಿ ಫೋನ್‌ ಮೆಟ್ರೋ ಕಿಟಕಿಗೆ ಸಿಕ್ಕಿಸಿದ ಕ್ಲಿಪ್ಪಿಂಗ್‌ ಒಂದನ್ನು ತೆಗೆದುಕೊಂಡು ನಂತರ ತಮ್ಮ ವಿಡಿಯೋ ಆಫ್‌ ಮಾಡುತ್ತಾರೆ. ಆನಂತರ ಮೆಟ್ರೋ ಒಳಗಡೆ ವಿಡಿಯೋ ಮಾಡುವ ಮತ್ತೊಬ್ಬ ವ್ಯಕ್ತಿ ಆಕೆಯ ವಿಡಿಯೋ ರೆಕಾರ್ಡ್‌ ಮಾಡುತ್ತಾರೆ. ನಂತರ ಫೋನ್‌ ಬಿದ್ದು ಹೋಯ್ತು ಎನ್ನುವಂತೆ ಕತ್ತಲು ಮಾಡುತ್ತಾರೆ. ಮೆಟ್ರೋ ಓಡುವ ವೇಗಕ್ಕೆ ಫೋನ್‌ ಹೋಗೋಕೆ ಹೇಗೆ ಸಾಧ್ಯ ಎಂದು ಯೋಚಿಸ್ತಾ ಇದ್ದೀರಾ? ಸಂಪೂರ್ಣ ವಿಡಿಯೋ ನೋಡಿ..

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !