ವಿಶ್ವದಾಖಲೆ ಬರೆದ ಕುಂಬಳಕಾಯಿ, ಇದಕ್ಕೆ ಯಾರ ಹೆಸರಿಟ್ಟಿದ್ದಾರೆ ಗೊತ್ತೇ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಮೆರಿಕದ ಮಿನ್ನೇಸೋಟದ ತೋಟಗಾರಿಕಾ ಶಿಕ್ಷಕ ಟ್ರಾವಿಸ್ ಗಿಂಗರ್ ಬೆಳೆಸಿದ ಕುಂಬಳಕಾಯಿ ವಿಶ್ವದಾಖಲೆ ಬರೆದಿದೆ. ಹಾಫ್ ಮೂನ್ ಬೇಯಲ್ಲಿ ನಡೆದ 50ನೇ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 1,246.9 ಕೆಜಿಯಷ್ಟು ತೂಗಿ ದಾಖಲೆ ಬರೆದಿದೆ. ಗೆದ್ದ ಈ ಕುಂಬಳಕಾಯಿಗೆ ಯಾರ ಹೆಸರಿಡಲಾಗಿದೆ ಗೊತ್ತೇ?

2021ರಲ್ಲಿ ಇಟಲಿಯ ಸ್ಟೆಫಾನೊ ಕಟ್ರುಪಿ 1,226 ಕೆಜಿ ಕುಂಬಳಕಾಯಿ ಬೆಳೆದು ದಾಖಲೆ ನಿರ್ಮಿಸಿದ್ದರು. ಈ ದಾಖಲೆ ಇದೀಗ ಮುರಿದಿದ್ದು, ಬ್ಯಾಸ್ಕೆಟ್‌ಬಾಲ್ ದಂತಕಥೆ ಮೈಕೆಲ್ ಜೋರ್ಡಾನ್ ಅವರ ಹೆಸರಿಡಲಾಗಿದೆ.

ಋತುವಿನ ಉದ್ದಕ್ಕೂ ಹೆಚ್ಚಿನ ತಾಪಮಾನ ಮತ್ತು ಆಲಿಕಲ್ಲು ಮಳೆಯಂತಹ ಸವಾಲುಗಳನ್ನು ಎದುರಿಸುತ್ತಕೇ ಮಾಲೀಕ ಗಿಂಗರ್ ಕುಂಬಳಕಾಯಿಯನ್ನು ಬೆಳೆಯಲು ಪ್ರಾರಂಭಿಸಿದರು. ಅಕ್ಟೋಬರ್ 7 ರಂದು, ಆತ ಮತ್ತು ಆತರ ಸ್ನೇಹಿತರು ಈ ಬೃಹತ್ ಕುಂಬಳಕಾಯಿಯನ್ನು ಟ್ರಕ್‌ಗೆ ಲೋಡ್ ಮಾಡಿದರು. ಅಕ್ಟೋಬರ್ 9 ರಂದು 50 ನೇ ಚಾಂಪಿಯನ್‌ಶಿಪ್‌ನಲ್ಲಿ ಭಾಗಿಯಾಗಲು ದೈತ್ಯ ಕುಂಬಳಕಾಯಿಯೊಂದಿಗೆ ಕ್ಯಾಲಿಫೋರ್ನಿಯಾಗೆ ತೆರಳಿದರು.

ಸ್ಪರ್ಧೆಯಲ್ಲಿ ವಿಜೇತರಾದ ಗಿಂಗರ್ $30,000 (ಸುಮಾರು ರೂ. 25 ಲಕ್ಷ) ನಗದು ಬಹುಮಾನವನ್ನು ಪಡೆದರು. ಕಳೆದ ವರ್ಷವೂ 1,161 ಕೆಜಿ ತೂಕದ ಕುಂಬಳಕಾಯಿ ಬೆಳೆದಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!