ಹೊಸದಿಗಂತ ಡಿಜಿಟಲ್ ಡೆಸ್ಕ್:
₹341ಕೋಟಿ ರೂಪಾಯಿ ಕಮಾಯಿ ಮಾಡಿದರೂ ಟಾಕ್ಸಿಕ್ ಸಿನಿಮಾವನ್ನು ಫ್ಲಾಪ್ ಎಂದೇ ಹೇಳಲಾಗುತ್ತಿದೆ. ಯಶ್ ಹಾಗೂ ಗೀತುಮೋಹನ್‌ದಾಸ್ ಅವರ ಕನಸಿನ ಕೂಸಾದ ಟಾಕ್ಸಿಕ್‌ನ್ನು ಪ್ರೇಕ್ಷಕ ಮೆಚ್ಚಿಕೊಂಡಿಲ್ಲ. ಟಾಕ್ಸಿಕ್ ಸಿನಿಮಾ ಆರಂಭಕ್ಕೂ ಮುನ್ನ ನೂರಾರು ಇಂಟರ್‌ವ್ಯೂ ನೀಡಿದ್ದರು. ಹಿಂದೆಲ್ಲೂ ನೋಡಿರದಂತಹ ಸಿನಿಮಾ ಇದಾಗಿದೆ ಎಂದು ಮನಸ್ಸುತುಂಬಿ ಹೇಳಿದ್ದರು. ಆದರೆ ಇಷ್ಟೆಲ್ಲಾ ಹಣ ಖರ್ಚು ಮಾಡಿ, ಪ್ಲಾನ್ ಮಾಡಿ, ಬಹುದೊಡ್ಡ ನಟ ನಟಿಯರನ್ನು ಕರೆದುಕೊಂಡು ಬಂದಿದ್ದ ಸಿನಿಮಾ ಜನರ ಮನಸ್ಸನ್ನು ಮುಟ್ಟುವುದರಲ್ಲಿ ಸೋತುಹೋಗಿತ್ತು.
ಸಿನಿಮಾ ರಿಲೀಸ್‌ಗೂ ಮುನ್ನ ಸಾವಿರ ಬಾರಿ ಕಾಣಿಸಿಕೊಂಡಿದ್ದ ಯಶ್ ಇದೀಗ ಎಲ್ಲಿ ಹೋದ್ರು? ಇಷ್ಟು ಸಮಯ ಸಾರ್ವಜನಿಕವಾಗಿ ಯಾಕೆ ಕಾಣಿಸಿಕೊಂಡಿಲ್ಲ ಎಂದು ಜನ ಪ್ರಶ್ನೆ ಮಾಡುತ್ತಿದ್ದರು. ಟಾಕ್ಸಿಕ್ ಫ್ಲಾಪ್ ಆದ ನಂತರ ಯಶ್ ತಮ್ಮ ಟೀಂ ಜೊತೆ ಮಾತನಾಡಿ ಲೋ ಪ್ರೊಫೈಲ್ ಮೇಂಟೇನ್ ಮಾಡಿದ್ದರು. ಇಲ್ಲಿ ಆದ ಲಾಸ್‌ನ್ನು ಸರಿದೂಗಿಸಲು ರಾಮಾಯಣದ ಶೂಟಿಂಗ್‌ಗಾಗಿ ಹಣ ಪಡೆಯೋದಿಲ್ಲ ಎಂದು ಹೇಳಿದ್ದರು ಎನ್ನಲಾಗಿದೆ. ಸದ್ಯ ಯಶ್ ರಾಮಾಯಣ ಶೂಟಿಂಗ್ ಹಾಗೂ ಫ್ಯಾಮಿಲಿಗೆ ಸಮಯ ನೀಡ್ತಿದ್ದಾರೆ.
ನಿನ್ನೆಯಷ್ಟೇ ಯಶ್ ತಮ್ಮ ಫ್ಯಾಮಿಲಿ ಜೊತೆ ವೆಕೇಷನ್‌ಗೆ ಹೋಗಿದ್ದಾರೆ. ಬೀಚ್ ಬದಿಯಲ್ಲಿ ಸೈಕ್ಲಿಂಗ್ ಮಾಡುತ್ತಿರುವ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಯಶ್ ಪತ್ನಿ, ನಟಿ ರಾಧಿಕಾ ಪಂಡಿತ್ ಶೇರ್ ಮಾಡಿಕೊಂಡಿದ್ದಾರೆ. ಅಲೆಗಳ ಸದ್ದಲ್ಲಿ ಕಳೆದುಹೋಗಿರಬಹುದು ಆದರೆ ನಗುವಿನ ಸದ್ದನ್ನು ಮರೆಯೋದಕ್ಕೆ ಆಗೋದಿಲ್ಲ ಎಂದು ರಾಧಿಕಾ ಬರೆದುಕೊಂಡಿದ್ದಾರೆ.



