ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಸಿಗೆ ಬಂತೆಂದರೆ ಸೆಖೆಗೆ ಉಸಿರುಗಟ್ಟಿಸುತ್ತದೆ. ಮುಖ, ಕೈ, ಕಾಲು, ದೇಹ ಎಲ್ಲವೂ ಬೆವರುತ್ತದೆ. ಬಿಸಿಲಿಗಷ್ಟೇ ಅಲ್ಲ..ವ್ಯಾಯಾಮ, ವಾಕಿಂಗ್ ಅಥವಾ ಜಿಮ್ ಮಾಡುವುದರಿಂದಲೂ ಇಡೀ ದೇಹ ಬೆವರುತ್ತದೆ. ಎಷ್ಟೇ ಬಿಸಿಲಿದ್ದರೂ ಬೆವರು ಸುರಿಯದ ನಮ್ಮ ದೇಹದ ಭಾಗವೊಂದಿದೆ ಅದರ ಬಗ್ಗೆ ಗೊತ್ತಾ?
ಎಷ್ಟೇ ಬಿಸಿಲಿರಲಿ ದೇಹದ ಬೆವರದ ಭಾಗವೆಂದರೆ ನಮ್ಮ ತುಟಿಗಳು (LIps), ಇಡೀ ದೇಹ ಬೆವರಿದರೂ ತುಟಿಗಳು ಬೆವರುವುದಿಲ್ಲ. ಏಕೆಂದರೆ ತುಟಿಗಳಲ್ಲಿ ಬೆವರು ಗ್ರಂಥಿಗಳಿಲ್ಲ. ಅದಕ್ಕಾಗಿಯೇ ಬೆವರು ನೀರು ತುಟಿಗಳಿಗೆ ತಾಗೋದಿಲ್ಲ.
ವಾತಾವರಣದಲ್ಲಿನ ಶಾಖದಿಂದಾಗಿ, ದೇಹದ ತೇವಾಂಶವು ಕಡಿಮೆಯಾಗುತ್ತದೆ. ಆದ್ದರಿಂದ ಹೆಚ್ಚು ನೀರು ಕುಡಿಯುವುದ ಆರೋಗ್ಯಕ್ಕರ ಒಳ್ಳೆಯದು.