ಪುಟಿನ್‌ ಸೇನಾ ಸಜ್ಜು ಘೋಷಣೆ ಬೆನ್ನಲ್ಲೇ ರಷ್ಯಾದ ಪುರುಷರು ಗೂಗಲ್‌ ನಲ್ಲಿ ಏನು ಹುಡುಕುತ್ತಿದ್ದಾರೆ ಗೊತ್ತಾ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ನಿನ್ನೆಯಷ್ಟೇ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಉಕ್ರೆನ್‌ ವಿರುದ್ಧದ ಯುದ್ಧಕ್ಕೆ ಮತ್ತಷ್ಟು ಚುರುಕು ನೀಡುವ ಹಿನ್ನೆಲೆಯಲ್ಲಿ ಸೇನೆಯನ್ನು ಭಾಗಶಃ ಸಜ್ಜುಗೊಳಿಸುವುದಾಗಿ ಹೇಳಿದ್ದಾರೆ. ಈ ಆದೇಶದ ಅಡಿಯಲ್ಲಿ ಈ ಹಿಂದೆ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಮತ್ತು ಶಸ್ತ್ರಾಸ್ತ್ರ ಕೌಶಲ ಹೊಂದಿರುವ ಪುರುಷರು ಕಡ್ಡಾಯವಾಗಿ ಸೈನ್ಯ ಸೇರಬೇಕು ಎಂಬ ನಿಯಮ ಮಾಡಲಾಗಿದೆ. ಅಗತ್ಯ ಬಿದ್ದಾಗ ದೇಶಕ್ಕೆ ಸೇವೆ ಸಲ್ಲಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಪುಟಿನ್‌ ಹೇಳಿದ್ದಾರೆ.

ಆದರೆ ಪುಟಿನ್‌ ಅವರ ಈ ಘೋಷನೆಯ ಬೆನ್ನಲ್ಲೇ ರಷ್ಯಾದ ಗೂಗಲ್‌ ನಲ್ಲಿ ಎರಡು ವಿಷಯಗಳ ಕುರಿತಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹುಡುಕಾಟ ನಡೆಸಲಾಗಿದೆ ಎಂದು ಕೆಲ ವರದಿಗಳು ಉಲ್ಲೇಖಿಸಿವೆ. ಸೈನ್ಯಕ್ಕೆ ಸೇರುವ ಕಡ್ಡಾಯ ನಿಯಮವನ್ನು ಒಪ್ಪಿಕೊಳ್ಳಲು ಇಷ್ಟವಿಲ್ಲದೇ ʼರಷ್ಯಾವನ್ನು ತೊರೆಯುವುದು ಹೇಗೆ?ʼ ಎಂದು ಹಲವರು ಹುಡುಕಾಡಿದರೆ ಇನ್ನೂ ಕೆಲವರು ʼಕೈ ಮುರಿದು ಕೊಳ್ಳುವುದು ಹೇಗೆ?ʼ ಎಂಬುದರ ಕುರಿತಾಗಿ ಹುಡುಕಾಡಿದ್ದಾರೆ.

ದೇಶವನ್ನು ಬಿಟ್ಟರೆ ಸೈನ್ಯ ಸೇರುವ ಅಗತ್ಯವಿರುವುದಿಲ್ಲ ಅಥವಾ ಕೈ ಮುರಿದುಕೊಂಡರೆ ಬೇಕೆಂದರೂ ಸೈನ್ಯಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂಬುದು ಅಲ್ಲಿನ ಪುರುಷರ ಚಿಂತನೆಯಾಗಿರಬಹುದು. ಆದರೆ ಈ ವಿಷಯಗಳ ಕುರಿತಾಗಿ ಹೆಚ್ಚಿನ ಹುಡುಕಾಟ ನಡೆದಿರುವುದು ಅಲ್ಲಿನ ಬಹುತೇಕ ಪುರುಷರಿಗೆ ಯುದ್ಧ ಇಷ್ಟವಿಲ್ಲ ಎಂಬುದನ್ನು ಸೂಚಿಸುವಂತಿದೆ.

ಸೈನ್ಯವನ್ನು ಬಲಪಡಿಸುವ ದೃಷ್ಟಿಯಿಂದ ಎರಡನೇ ವಿಶ್ವ ಯುದ್ಧದ ನಂತರ ಇಂಥದ್ದೊಂದು ಘೋಷಣೆಯನ್ನು ಪುಟಿನ್‌ ಮಾಡಿದ್ದು ಅಗತ್ಯಬಿದ್ದರೆ ರಷ್ಯಾದ ರಕ್ಷಣೆಗೆ ಪರಮಾಣು ದಾಳಿಯನ್ನು ಮಾಡುವುದಾಗಿಯೂ ಹೇಳಿದ್ದಾರೆ.

ಯುದ್ಧದ ಕುರಿತು ಆಂತರಿಕವಾಗಿ ರಷ್ಯಾದಲ್ಲೇ ಪರವಿರೋಧದ ಚರ್ಚೆಗಳು ಎದ್ದಿವೆ. ಹಲವರು ಯುದ್ಧವನ್ನು ವಿರೋಧಿಸಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಪ್ರತಿಭಟನೆಗಳನ್ನು ಹತ್ತಿಕ್ಕಲು ಯತ್ನಿಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!