ಹೊಸದಿಗಂತ ಡಿಜಿಟಲ್ ಡೆಸ್ಕ್:
ಎನ್‌ಐಎ ತಂಡದ ಈ ಮಿಂಚಿನ ಹಲವು ದೇಶದ್ರೋಹಿಗಳ ಗುಂಡಿಗೆಯಲ್ಲಿ ನಡುಕ ಉಂಟುಮಾಡಿದೆ.
ದೇಶದಲ್ಲಿಯೇ ಸಂಚಲನ ಮೂಡಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಜುಲೈ ೨೬ರ ರಾತ್ರಿ ನಡೆದ ಬಿಜೆಪಿಯ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಎನ್‌ಐಎಗೆ ವಹಿಸಲಾಗಿದ್ದು, ತನಿಖೆಯ ಸಾರಥ್ಯ ವಹಿಸಿಕೊಂಡಿರುವ ತಂಡ ಈಗ ಕೋದಲೆಳೆ ಮಾಹಿತಿಯನ್ನು ಬಿಡದೆ ಪ್ರಕರಣದ ಹಿನ್ನೆಲೆಯನ್ನು ಜಾಲಾಡಲು ಆರಂಭಿಸಿದೆ.
ಕೆಲವು ದಿನಗಳ ಹಿಂದೆಯಷ್ಟೇ ಸುಳ್ಯ ಹಾಗೂ ಪುತ್ತೂರು ತಾಲ್ಲೂಕಿನ 32 ಕಡೆಗಳಲ್ಲಿನ ಮನೆಗಳು, ಕಟ್ಟಡಗಳ ಮೇಲೆ ಎನ್‌ಐಎ ದಾಳಿ ನಡೆಸಿತ್ತು. ಜೊತೆಗೆ ಪ್ರವೀಣ್ ಹತ್ಯೆಯಲ್ಲಿ ಬಂಧಿತರಾಗಿರುವ ಆರೋಪಿಗಳೂ ಕೆಲವೊಮದು ಮಾಹಿತಿಗಳನ್ನು ಬಹಿರಂಗಪಡಿಸಿದ್ದರು. ಇವೆಲ್ಲವನ್ನೂ ಕಲೆಹಾಕಿರುವ ತಂಡ ಈಗ ಹೆಚ್ಚಿನ ತನಿಖೆಗಿಳಿದಿದೆ.
ಭಯೋತ್ಪಾದನೆಗೆ ಧನಸಹಾಯ, ತರಬೇತಿ ಶಿಬಿರಗಳನ್ನು ಆಯೋಜಿಸುವುದು ಮತ್ತು ನಿಷೇಧಿತ ಸಂಸ್ಥೆಗಳಿಗೆ ಸೇರಲು ಜನರನ್ನು ಮೂಲಭೂತವಾಗಿ ರೂಪಿಸುವ ವ್ಯಕ್ತಿಗಳ ವಸತಿ ಮತ್ತು ಅಧಿಕೃತ ಆವರಣದಲ್ಲಿ ಈ ಹುಡುಕಾಟಗಳನ್ನು ನಡೆಸಲಾಗುತ್ತಿದೆ.