August 12, 2026
Wednesday, August 12, 2026
spot_img

ಸದಾ ಯಂಗ್ ಆಗಿ ಕಾಣಲು ಬೆಳಿಗ್ಗೆ ಎದ್ದ ಕೂಡಲೇ ಏನು ಮಾಡಬೇಕು ಗೊತ್ತಾ?

ಬೆಳಗ್ಗೆ ಎದ್ದ ತಕ್ಷಣ 1-2 ಲೋಟ ಉಗುರುಬೆಚ್ಚಗಿನ ನೀರನ್ನು ಕುಡಿಯುವುದರಿಂದ ದೇಹದ ಕಲ್ಮಶಗಳು ಹೊರಹೋಗುತ್ತವೆ. ಇದು ಒಳಗಿನಿಂದಲೇ ಚರ್ಮಕ್ಕೆ ತೇವಾಂಶ ನೀಡಿ, ನೈಸರ್ಗಿಕ ಗ್ಲೋ ನೀಡುತ್ತದೆ.

ರಾತ್ರಿ ಚರ್ಮದಲ್ಲಿ ಬಿಡುಗಡೆಯಾಗುವ ಜಿಡ್ಡನ್ನು ಹೋಗಲಾಡಿಸಲು ಮೃದುವಾದ ಕ್ಲೆನ್ಸರ್ ಬಳಸಿ ಮುಖ ತೊಳೆಯಿರಿ. ನಂತರ ತಣ್ಣೀರನ್ನು ಮುಖಕ್ಕೆ ಚಿಮುಕಿಸುವುದರಿಂದ ರಕ್ತಸಂಚಾರ ಹೆಚ್ಚಿ, ಚರ್ಮ ತಾಜಾತನದಿಂದ ಕಂಗೊಳಿಸುತ್ತದೆ.

ಮುಖ ತೊಳೆದ ನಂತರ ಆಲ್ಕೋಹಾಲ್ ಮುಕ್ತ ಟೋನರ್ ಬಳಸಿ ಚರ್ಮದ pH ಮಟ್ಟವನ್ನು ಕಾಪಾಡಿಕೊಳ್ಳಿ. ಬಳಿಕ ನಿಮ್ಮ ಚರ್ಮಕ್ಕೆ ಹೊಂದುವ ಲೈಟ್ ವೇಟ್ ಮೊಯಿಶ್ಚರೈಸರ್ ಹಚ್ಚುವುದರಿಂದ ತ್ವಚೆಯು ದಿನಪೂರ್ತಿ ಸಾಫ್ಟ್ ಆಗಿರುತ್ತದೆ.

ಮನೆಯಿಂದ ಹೊರಗಡೆ ಹೋಗದಿದ್ದರೂ ಬೆಳಗಿನ ಸ್ಕಿನ್ ಕೇರ್‌ನಲ್ಲಿ ಸನ್‌ಸ್ಕ್ರೀನ್ ಇರಲೇಬೇಕು. ಇದು ಸೂರ್ಯನ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸಿ, ಕಪ್ಪುಕಲೆ ಹಾಗೂ ಸುಕ್ಕುಗಳನ್ನು ತಡೆಯುತ್ತದೆ.

ಬೆಳಗ್ಗೆ 15 ನಿಮಿಷಗಳ ಕಾಲ ಪ್ರಾಣಾಯಾಮ ಅಥವಾ ಯೋಗ ಮಾಡುವುದರಿಂದ ದೇಹದಲ್ಲಿ ಆಮ್ಲಜನಕದ ಸರಬರಾಜು ಹೆಚ್ಚುತ್ತದೆ. ಇದು ಚರ್ಮಕ್ಕೆ ಅದ್ಭುತವಾದ ನೈಸರ್ಗಿಕ ಹೊಳಪನ್ನು ನೀಡುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !