Wednesday, February 28, 2024

ನಿರ್ಮಲಾ ಸೀತಾರಾಮನ್ ಧರಿಸಿರುವ ಸೀರೆ ಯಾವುದು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರತೀ ಬಾರಿ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಧರಿಸಿರುವ ಸೀರೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತದೆ. ಮುಂದಿನ ಬಾರಿ ಯಾವ ಸಂಪ್ರದಾಯದ, ಯಾವ ಕಥೆಯನ್ನು ಹೇಳುವ ಸೀರೆ ಉಡುತ್ತಾರೆ ಎನ್ನುವ ಕುತೂಹಲ ಸಹಜವಾಗಿ ಎಲ್ಲರಲ್ಲಿಯೂ ಮೂಡಿರುತ್ತದೆ.

Budget 2023: Nirmala Sitharaman Takes Out Her Brightest Red Silk Saree to Present Desh Ka Bahi-Khata - Viral Picsಕಳೆದ ಬಜೆಟ್‌ನಲ್ಲಿ ಕರ್ನಾಟಕದ ಇಳಕಲ್ ಸೀರೆಯನ್ನು ನಿರ್ಮಲಾ ಅವರು ಉಟ್ಟಿದ್ದರು. ಈ ಬಾರಿ ನೀಲಿ, ಕ್ರೀಮ್ ಶೇಡ್‌ನ ತುಸ್ಸಾರ್ ಸೀರೆಯನ್ನು ನಿರ್ಮಲಾ ಅವರು ಉಟ್ಟಿದ್ದಾರೆ. ಇದರಲ್ಲಿ ಎಲೆಗಳಿರುವ ಪ್ರಿಂಟ್ ಇದ್ದು ರೇಷ್ಮೆ ಸೀರೆಯಾಗಿದೆ.

Imageಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್ ಹಾಗೂ ಒಡಿಶಾ ಪ್ರದೇಶಗಳಲ್ಲಿ ಈ ಸೀರೆಯನ್ನು ಕಾಣಬಹುದಾಗಿದೆ. ಬಿಹಾರದ ಭಾಗಲ್‌ಪುರವನ್ನು ಸಿಲ್ಕ್ ಸಿಟಿ ಆಫ್ ಇಂಡಿಯಾ ಎಂದು ಕರೆಯಲಾಗುತ್ತದೆ. ತುಸ್ಸಾರ್ ರೇಷ್ಮೆ ಸೀರೆ ಅಲ್ಲಿನ ವಿಶೇಷತೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!