LIFESTYLE | ಗಂಡಸರ‍್ಯಾಕೆ ಅಡುಗೆ ಕಲೀಬೇಕು? ಇದನ್ನು ಓದಿ ಮನಸ್ಸು ಬದಲಾಗಬಹುದು..

ಮೇಘನಾ ಶೆಟ್ಟಿ, ಶಿವಮೊಗ್ಗ

ಅಕ್ಕ ಅಡುಗೆ ಕಲೀತಾಳೆ, ತಮ್ಮ ತರಕಾರಿ ತರ‍್ತಾನೆ, ಅಪ್ಪ ಆಫೀಸ್‌ಗೆ ಹೋಗ್ತಾರೆ, ಅಮ್ಮ ಟಿಫನ್ ಬಾಕ್ಸ್ ತುಂಬ್ತಾರೆ…

ನಾವು, ನಮ್ಮಮ್ಮ, ನಮ್ಮಜ್ಜಿ, ಅವರಜ್ಜಿ ಹೀಗೆ ಎಲ್ಲರೂ ಇದೇ ಅಲ್ವಾ ಮಾಡಿಕೊಂಡು ಬಂದಿರೋದು? ದೊಡ್ಡ ದೊಡ್ಡ ಹೊಟೇಲ್‌ಗಳಲ್ಲಿ ಶೆಫ್ ಗಂಡಸರೇ ಆದ್ರೂ ಮನೆಯಲ್ಲಿ ಗಂಡಸರು ಒಂದು ಲೋಟ ಕಾಫಿ ಮಾಡಿಬಿಟ್ರೆ ಎಲ್ಲರೂ ಬೆನ್ನು ತಟ್ತಾರೆ. ಆದರೆ ಗಮನಿಸಿ ಗಂಡಸರು ಅಡುಗೆ ಮಾಡೋದನ್ನು ಪ್ರೊಫೆಶನ್ ಅಂತಲೋ, ಕಲೆ ಅಂತಲೋ ಈಗಲೂ ಎಷ್ಟೊಂದು ಜನ ಒಪ್ಪೋದೇ ಇಲ್ಲ.

VILLAGE MARRIAGE FOOD | Village Wedding Food / Beef & Khichuri Preparation  for 500 People /Part - 04 - YouTubeಒಂದು ಬಾರಿ ತಿಂದು ಬರೋ ಸಣ್ಣ ಪುಟ್ಟ ಖಾನಾವಳಿಗಳಲ್ಲಿ ಮಹಿಳೆಯರೇ ಅಡುಗೆ ಮಾಡಿದ್ರೆ ಚೆನ್ನಾಗಿರತ್ತೆ ಅಂತ ಆಲೋಚಿಸೋ ನಮಗೆ ಗೃಹಪ್ರವೇಶ, ಮದುವೆ ಯಾವುದೇ ಸಂಭ್ರಮಕ್ಕೂ ’ಅಡುಗೆ ಭಟ್ಟರೇ’ ಇಷ್ಟ. ಅದೇನೋ ಅವರು ಚೆನ್ನಾಗಿ ಹ್ಯಾಂಡಲ್ ಮಾಡ್ತಾರೆ ಅನ್ನೋ ನಂಬಿಕೆ.

ಮನೆಗಳಲ್ಲಿ ಅಡುಗೆ ಮಾಡೋದು ಗಂಡು ಅಥವಾ ಹೆಣ್ಣಿನ ಕೆಲಸ ಅಲ್ಲ, ಅದು ಜೀವನಕ್ಕೆ ಬೇಕೇ ಬೇಕು ಎನ್ನೋ ಸಾಮಾನ್ಯ ಸ್ಕಿಲ್ ಅನ್ನೋದು ಅರಿತುಬಿಟ್ರೆ ಎಲ್ಲವೂ ಸಿಂಪಲ್ ಆಗಿಬಿಡುತ್ತದೆ.

ಮಕ್ಕಳು ಕೂಡ ನಿಮ್ಮನ್ನೇ ಸೂಕ್ಷ್ಮವಾಗಿ ನೋಡ್ತಾರೆ, ತಾತ, ಅಪ್ಪ, ಅಣ್ಣ, ತಮ್ಮ ಯಾರೂ ಅಡುಗೆ ಮನೆಗೆ ಹೋಗೋದಿಲ್ಲ. ಅಜ್ಜಿ, ಅಮ್ಮ, ಅಕ್ಕ, ತಂಗಿ ಅಡುಗೆ ಮನೆ ಬಿಟ್ಟು ಬರೋದಿಲ್ಲ. ಹಾಗಿದ್ರೆ ಅಡುಗೆ ಮನೆಯ ಒಡತಿ ಹೆಣ್ಣು ಅಂತಲೇ ಅವರು ಫಿಕ್ಸ್ ಆಗ್ತಾರೆ. ಅಷ್ಟೇ ಯಾಕೆ? ಹೆಣ್ಣುಮಕ್ಕಳಿಗೆ ಅಡುಗೆ ಆಟಿಕೆಗಳು, ಗಂಡು ಮಕ್ಕಳಿಗೆ ಕಾರು ಬೈಕ್ ಕೊಡಿಸೋದು ಕೂಡ ನಾವೇ ಅಲ್ವಾ?

Premium AI Image | A Young Indian Woman in a Traditional Outfit Prepares  Food in a Cluttered Kitchenಗಂಡಸರೂ ಅಡುಗೆ ಕಲಿಯಲೇಬೇಕು.. ನಿಮಗೆ ಹುಷಾರಿಲ್ಲ ಅಂತಾದ್ರೆ ಅಮ್ಮ ಏನೆಲ್ಲಾ ಮಾಡ್ತಾಳೆ, ಆದ್ರೆ ಅವಳಿಗೆ ಹುಷಾರಿಲ್ಲ ಅಂದ್ರೂ ಗಂಡ ಮಕ್ಕಳು ಹಸಿದುಕೊಂಡಿರ‍್ತಾರೆ ಅಂತ ಎದ್ದು ಅಡುಗೆ ಮಾಡ್ತಾರೆ. ಇಂಥ ಸಂದರ್ಭದಲ್ಲಿ ನೀವೇ ಅಡುಗೆ ಮಾಡಿ ಅಮ್ಮನನ್ನು ಊಟಕ್ಕೆ ಕೂಗಿದ್ರೆ ಚೆನ್ನಾಗಿರೋದಿಲ್ವಾ?

ಇದನ್ನೂ ಬಿಡಿ ನೀವು ಅಡುಗೆ ಕಲಿಯೋದಕ್ಕೆ ಯಾರಿಗೂ ಹುಷಾರು ತಪ್ಪೋದು ಬೇಡ, ನಿಮಗಾಗಿ ನೀವು ಅಡುಗೆ ಮಾಡಿಕೊಳ್ಳಬಹುದಲ್ವಾ? ಕೆಲಸಕ್ಕೋ ಓದಲೋ ಮನೆಯಿಂದ ಹೊರಗಿದ್ದು ರೂಮ್ ಮಾಡಿದ್ರೆ ದಿನವೂ ಹೊರಗಿನ ಊಟ ತಿಂದುಕೊಂಡು ಇರ‍್ತೀರಾ? ಮನೆಗೆ ಫೋನ್ ಮಾಡಿ ಎಲ್ಲಾ ಒಕೆ ಆದ್ರೆ ಊಟ ಸೆಟ್ ಆಗ್ತಾ ಇಲ್ಲ, ಆರೋಗ್ಯ ಕೈ ಕೊಡ್ತಿದೆ ಎಂದು ಹೇಳಿರ‍್ತೀರಿ. ನೀವೇ ಅಡುಗೆ ಮಾಡಿಬಿಟ್ರೆ ಎಲ್ಲವೂ ಸೆಟ್ ಆಗುತ್ತದೆ.

Indian Woman Cooking Images – Browse 7,675 Stock Photos, Vectors, and Video  | Adobe Stockಗಂಡಸರ‍್ಯಾಕೆ ಅಡುಗೆ ಕಲೀಬೇಕು?

ಬೇರೆ ಎಲ್ಲ ಕಲೆಗಳ ರೀತಿ ಅಡುಗೆ ಕೂಡ ಒಂದು ಕಲೆ, ಕಲಿಯೋವರೆಗೂ ಕಷ್ಟ, ಕಲಿತಮೇಲೆ ಸಾಕಷ್ಟು ಅದ್ಭುತಗಳನ್ನು ಕ್ರಿಯೇಟ್ ಮಾಡೋ ಶಕ್ತಿ ನಿಮ್ಮದಾಗುತ್ತದೆ.

Cooking Man" Images – Browse 57 Stock Photos, Vectors, and Video | Adobe  Stockಅಡುಗೆ ಮಾಡೋದು ಕಷ್ಟ ಅಂತ ಯಾರು ಹೇಳ್ತಾರೆ, ಹೊಸ ರೆಸಿಪಿ, ಹೊಸ ವಿಧಾನ, ಹಳೆ ತಪ್ಪುಗಳಿಂದ ಕಲಿಯೋದು, ಹಾಗೆ ಅಡುಗೆ ಮಾಡೋ ಗಂಡಸರು ಹೆಣ್ಣುಮಕ್ಕಳಿಗೆ ತುಂಬಾನೇ ಇಷ್ಟ ಆಗ್ತಾರಂತೆ.

Science of Attraction: Why We Gravitate To People Who Love Cookingದುಡ್ಡು ಉಳಿಸ್ಬೋದು ಯೋಚ್ನೆ ಮಾಡಿ, ನಿಮ್ಮ ಹೆಂಡತಿ ಇವತ್ತು ಅಡುಗೆ ಮಾಡೋದಿಲ್ಲ ಸುಸ್ತಾಗಿದೆ ಅಂದ್ರೆ ಸರಿ ಅಂತ ಮೂರು ವೆರೈಟಿ ಫುಡ್ ಆರ್ಡರ್ ಮಾಡ್ತೀರಿ. ಐನೂರು ರೂಪಾಯಿ ಖರ್ಚಾಗುತ್ತೆ, ಅದರ ಬದಲು ಅನ್ನ ರಸಂ ನೀವೇ ಮಾಡಿಕೊಟ್ರೆ ಹೆಂಡತಿ ತಿನ್ನೋದಿಲ್ಲ ಅಂತಾರಾ?

Online Food Ordering Statistics Every Restaurateur Should Know!ನೀವು ಡಯಟ್ ಕಾನ್ಶಿಯಸ್ ಆಗಿದ್ರೆ ಅಡುಗೆಯಲ್ಲಿ ಏನೇನು ಹಾಕ್ತಿದ್ದೇವೆ ಅನ್ನೋ ವಿಷಯ ಅಮ್ಮನ್ನ ಕೇಳ್ಬೇಕಿಲ್ಲ ನೀವೇ ತಿಳ್ಕೋಬೋದು. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಇರೋರಿಗೆ ಕುಕ್ಕಿಂಗ್ ಭಾಗ್ಯವೇ ಸರಿ.

Premium Photo | Plate with a paleo diet food, boiled eggs, avocado,  cucumber, nuts, cherry and strawberries, paleo breakfast.ಜನ ನಿಮ್ಮಿಂದ ಇಂಪ್ರೆಸ್ ಆಗ್ತಾರೆ, ಸಮಾಜದಲ್ಲಿ ನೀವು ಫೇಮಸ್ ಆಗ್ತೀರಿ. ಅಡುಗೆ ಮಾಡೋ ಫೋಟೊವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಾಕಿ ನೋಡಿ, ನಿಮ್ಮನ್ನು ನೋಡಿ ನಾಲ್ಕು ಜನ ಇನ್‌ಫ್ಲೂಯೆನ್ಸ್ ಆಗ್ತಾರೆ.

A quest to get men into the kitchen - The Globe and Mailಹಳೆ ಕಟ್ಟುಪಾಡುಗಳನ್ನು ತೆಗೆದು ಹಾಕಿ, ನಿಮ್ಮ ಮಗಳಿಗೆ ಬೆಸ್ಟ್ ಎಕ್ಸಾಂಪಲ್ ಆಗಿ, ಮದುವೆಯಾಗುವ ಹುಡುಗನಲ್ಲಿ ಆಕೆ ಹುಡುಕುವ ಗುಣಗಳಲ್ಲಿ ಇದೂ ಸೇರಲಿ.

ಅಡುಗೆ ಅನ್ನೋ ಸಣ್ಣ ವಿಷ್ಯಕ್ಕೆ ಇಷ್ಟೆಲ್ಲಾ ಮಾತ್ಯಾಕೆ ಅಂತ ನಿಮಗೆ ಅನ್ನಿಸಬಹುದು, ಆದ್ರೆ ಸ್ವಲ್ಪ ಯೋಚನೆ ಮಾಡಿ, ಊಟ ಇಲ್ದೆ ನಾವು ಇಲ್ಲ, ಒಂದೊಳ್ಳೆ ಊಟ ನಿಮ್ಮ ಮೂಡ್‌ನ್ನು ಚೆನ್ನಾಗಿ ಮಾಡುತ್ತೆ ಅಂತಾದ್ರೆ ಒಂದು ಕೆಟ್ಟ ಊಟ ನಿಮ್ಮ ಮೂಡ್‌ನ್ನು ಹಾಳೂ ಮಾಡತ್ತೆ. ಕೋಟಿ ಖರ್ಚು ಮಾಡಿ ಮದುವೆ ಮಾಡಿದ್ರೂ ಜನ ನೆನಪಿಟ್ಟುಕೊಳ್ಳೋದು ನೀವು ಹಾಕಿದ ಊಟವನ್ನಷ್ಟೇ!

ಹಾಗಂತ ಎಲ್ಲ ಗಂಡಸರೂ ಅಡುಗೆ ಹೆಣ್ಣುಮಕ್ಕಳದ್ದೇ ಅಂತ ಫಿಕ್ಸ್ ಆಗಿಲ್ಲ, ಎಷ್ಟೋ ಗಂಡಸರು ಇದು ಜೆಂಡರ್‌ರೋಲ್ ಅಲ್ಲ ಲೈಫ್ ಸ್ಕಿಲ್ ಅನ್ನೋದನ್ನು ಒಪ್ಪಿದ್ದಾರೆ. ಪತ್ನಿಗೆ ತಾಯಿಗೆ ಅಡುಗೆ ಮನೆಯಲ್ಲಿ ಸಹಾಯ ಮಾಡೋದನ್ನು ಎಂಜಾಯ್ ಮಾಡ್ತಾರೆ. ಈ ಸಾಲಿಗೆ ಇನ್ನಷ್ಟು ಜನ ಸೇರಲಿ ಅನ್ನೋದಷ್ಟೆ ನಮ್ಮ ಆಶಯ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!