ರಾಹುಲ್‌ ಗಾಂಧಿ ಯಾಕೆ ಬಿಳಿ ಟೀ ಶರ್ಟ್‌ ಅನ್ನೇ ಧರಿಸುತ್ತಾರೆ ಗೊತ್ತಾ?: ಇಲ್ಲಿ ಹೇಳ್ತಾರೆ ನೋಡಿ ಕಾರಣ…

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರು ಯಾವಾಗಲೂ ಬಿಳಿ ಟೀ ಶರ್ಟ್‌ ಅನ್ನೇ ಏಕೆ ಧರಿಸುತ್ತಾರೆ ಗೊತ್ತಾ ? ಈ ಕುರಿತು ಸ್ವತಃ ರಾಹುಲ್‌ ಅವರೇ ಉತ್ತರ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಕಾಂಗ್ರೆಸ್‌ ಬಿಡುಗಡೆ ಮಾಡಿದ ‘ಅ ಡೇ ಕ್ಯಾಂಪೇನಿಂಗ್ ಇನ್ ಕರ್ನಾಟಕ’ ಎರಡು ನಿಮಿಷಗಳ ವಿಡಿಯೊದಲ್ಲಿ ಇಂತಹ ಹಲವು ಪ್ರಶ್ನೆಗಳಿಗೆ ರಾಹುಲ್ ಪ್ರತಿಕ್ರಿಯಿಸಿದ್ದಾರೆ.
ಬಿಳಿ ಶರ್ಟ್‌ ಧರಿಸುವ ಹಿಂದಿರುವ ಕಾರಣ ಪಾರದರ್ಶಕತೆ ಮತ್ತು ಸರಳತೆ. ನಾನು ಬಟ್ಟೆ ಬಗ್ಗೆ ಹೆಚ್ಚು ಆಸಕ್ತಿ ಹೊಂದಿಲ್ಲ. ಸರಳವಾಗಿರಲು ಇಷ್ಟಪಡುತ್ತೇನೆ ಎಂದು ಹೇಳಿದರು.

ಇದೇ ವೇಳೆ ಅಧಿಕಾರ ಅಥವಾ ಸಿದ್ದಾಂತ ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್‌, ‘ನನ್ನ ಪ್ರಕಾರ ಸಿದ್ದಾಂತದ ಸ್ಪಷ್ಟ ತಿಳಿವಳಿಕೆ ಇಲ್ಲದೇ ಅಧಿಕಾರದ ಕಡೆಗೆ ದೊಡ್ಡ ಸಂಘಟನೆಯಾಗಿ ಹೋಗಲು ಸಾಧ್ಯವಿಲ್ಲ. ಬಡವರ ಪರ, ಮಹಿಳಾ ಪರ, ಎಲ್ಲರನ್ನೂ ಸಮಾನವಾಗಿ ಪರಿಗಣಿಸುವ ಕಾಂಗ್ರೆಸ್‌ ಸಿದ್ಧಾಂತವನ್ನು ನಾವು ಜನರಿಗೆ ಮನವರಿಕೆ ಮಾಡಬೇಕು’ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!