ಮಕ್ಕಳಿಗೆ ಊಟ ಮಾಡಿಸೋಕೆ ಸರ್ಕಸ್ ಮಾಡ್ತೀರಾ, ಅವರೇ ಊಟ ಮಾಡೋದು ಹೀಗೆ ಕಲಿಸಿ..

ಚಿಕ್ಕವರಿಗೆ ಊಟ ತಿನ್ನಿಸೋದು ಪ್ರೀತಿಯ ಕೆಲಸ ಹೌದು, ಆದರೆ ಕೆಲವೊಮ್ಮೆ ತಾಳ್ಮೆ ಮೀರುತ್ತದೆ. ತಿನ್ನಲು ಇಷ್ಟ ಇಲ್ಲವಾದರೆ ಬಾಯೊಳಗೆ ತುರುಕಿ ಜಗಿಯುವಂತೆ ಮಾಡ್ತೇವೆ, ಟಿವಿ ತೋರಿಸಿ ತಿನ್ನಿಸುತ್ತೇವೆ. ಇದೆಲ್ಲದಕ್ಕಿಂತ ಅವರೇ ಊಟ ತಿನ್ನುವಂತೆ ಕಲಿಸಿಬಿಟ್ಟರೆ? ಈ ಅಭ್ಯಾಸ ಅವರು ಅನ್ನ ತಿನ್ನಲು ಆರಂಭಿಸಿದಾಗಿನಿಂದಲೇ ಮಾಡಿಬಿಡಿ, ಅವರೂ ತಿನ್ನಲಿ, ನೀವು ತಿನ್ನಿಸಿ..

ಮಕ್ಕಳೇ ಊಟ ಮಾಡುವಂತೆ ಮಾಡೋದು ಹೇಗೆ?

  • ಪ್ರಾಕ್ಟೀಸ್ ಮಾಡಲು ಸಾಕಷ್ಟು ಸಮಯ ನೀಡಿ,ಒಂದು ದಿನ ಅಥವಾ ಒಂದು ತಿಂಗಳ ಕೆಲಸ ಅಲ್ಲ, ತಿಂಗಳಾನುಗಟ್ಟಲೆ ಅವರಿಗೆ ತಿನ್ನಲು ನೀಡಿ.
  • ಅವರ ಜೊತೆ ನೀವು ಕುಳಿತುಕೊಂಡ ಊಟ ಮಾಡಿ, ನೀವು ತಿನ್ನುವುದನ್ನು ನೋಡಿ ಅವರೂ ಕಲಿತುಕೊಳ್ಳಲಿ.
    ಸ್ಪೂನ್‌ಗಿಂತ ಕೈಯಲ್ಲಿ ತಿನ್ನುವ ಅಭ್ಯಾಸ ಮಾಡಿಸಿ
  • ಆಹಾರದ ಆಕಾರ, ರುಚಿ, ಬಣ್ಣ ಎಲ್ಲವನ್ನೂ ಅರಿತುಕೊಳ್ಳಲು ಸಮಯ ನೀಡಿ.
  • ಪಾತ್ರೆಗಳನ್ನು ಕೈಗೆ ನೀಡಿ, ಸ್ಪೂನ್, ಫೋರ್ಕ್ ಬಳಕೆ ಮಾಡಲು ಹೇಳಿಕೊಡಿ.
  • ಮಕ್ಕಳು ಅವರೇ ತಿನ್ನಲು ಕುಳಿತಾಗ ಮೊದಲು ಊಟ ಮೈಗೆ ಕೈಗೆ ಹಾಗೂ ಬಟ್ಟೆಗೆ ಮೆತ್ತಿಕೊಳ್ಳುತ್ತಾರೆ. ಇದಕ್ಕೆ ತಯಾರಾಗಿರಿ. ಅವರನ್ನು ತಡೆಯಬೇಡಿ.
  • ಎಲ್ಲಕ್ಕಿಂತ ಮುಖ್ಯವಾಗಿ ತಾಳ್ಮೆ ಇರಲಿ. ಒಂದು ದಿನದಲ್ಲಿ ಏನೂ ಆಗದು.
  • ಅವರು ಬೇಡ ಎಂದ ಆಹಾರವನ್ನು ತಿನ್ನಿಸಲು ಯತ್ನಿಸಬೇಡಿ, ಇದರಿಂದ ಊಟದ ಮೇಲೆ ಅವರಿಗೆ ಉತ್ಸಾಹ ಹೋಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!