Photo Gallery| ಅಮೆರಿಕಾದಲ್ಲಿ ಇಯಾನ್‌ ಚಂಡಮಾರುತ ಸೃಷ್ಟಿಸಿದ ಅಲ್ಲೋಲ-ಕಲ್ಲೋಲ ನೀವೇ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಯಾನ್ ಚಂಡಮಾರುತ ಅಮೆರಿಕದ ಫ್ಲೋರಿಡಾದಲ್ಲಿ ಭಾರಿ ಹಾನಿಯನ್ನುಂಟು ಮಾಡಿದೆ. ಭೀಕರ ಗಾಳಿ ಹಾಗೂ ಧಾರಾಕಾರ ಮಳೆಗೆ ಮನೆಗಳೆಲ್ಲ ಜಲಾವೃತಗೊಂಡಿವೆ. ರಸ್ತೆಗಳು ಪ್ರವಾಹದಂತಾಗಿದ್ದು, ಮನೆಗಳಿಗೆ ನೀರು ನುಗ್ಗಿದೆ. ಮನೆ ಮುಂದೆ ನಿಲ್ಲಿಸಿದ್ದ ವಾಹನಗಳು ಕೊಚ್ಚಿ ಹೋಗಿವೆ.

ಇಯಾನ್ ಚಂಡಮಾರುತದಿಂದ ಉಂಟಾದ ವಿನಾಶದಿಂದಾಗಿ ಯುನೈಟೆಡ್ ಸ್ಟೇಟ್ಸ್ನ ಫ್ಲೋರಿಡಾದಲ್ಲಿ 12 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯಾದ್ಯಂತ ವಿದ್ಯುತ್ ತಂತಿಗಳು ಹಾನಿಗೀಡಾಗಿವೆ. ಕುಸಿದು ಬಿದ್ದಿರುವ ಮನೆಗಳು ಹಾಗೂ ಅಪಾಯಕಾರಿ ನೀರು ಹರಿಯುತ್ತಿರುವುದರಿಂದ ಜನ ಭಯದಿಂದ ತತ್ತರಿಸಿದ್ದಾರೆ. ಅಮೆರಿಕ ಅಧಿಕಾರಿಗಳು ಇದನ್ನು ಮಾರಣಾಂತಿಕ ಚಂಡಮಾರುತ ಎಂದು ಬಣ್ಣಿಸಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!