Friday, December 8, 2023

Latest Posts

HEALTH | ನಿಮ್ಮ ಉಗುರಿಗೆ ಪಾಲೀಶ್‌ ಹಚ್ಚುತ್ತೀರಾ? ಒಮ್ಮೆ ಈ ಸ್ಟೋರಿ ನೋಡಿ

ಪುರುಷರಿಗಿಂತ ಮಹಿಳೆಯರಿಗೆ ಉಗುರಿನ ಬಗ್ಗೆ ಹೆಚ್ಚು ಕಾಳಜಿ. ಹೆಣ್ಣುಮಕ್ಕಳು ಕೈ ಕಾಲುಗಳ ಉಗುರು ಅಂದವಾಗಿ ಕಾಣಲೆಂದು ಬಣ್ಣಗಳನ್ನು ಹಚ್ಚುತ್ತಾರೆ. ಉಗುರುಗಳ ಸೌಂದರ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ.

ಮದುವೆ ಅಥವಾ ಇನ್ನಿತರ ಶುಭ ಕಾರ್ಯಗಳ ಸಮಾರಂಭಗಳಲ್ಲಂತೂ ವಿಧ ವಿಧವಾದ ನೈಲ್ ಪಾಲಿಶ್ ಬಳಕೆ ಕಾಣಸಿಗುತ್ತವೆ.ಅತಿಯಾಗಿ ನೈಲ್ ಪಾಲಿಶ್ ಬಳಸುವುದರಿಂದ  ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ನೈಲ್ ಪಾಲಿಶ್ ನಲ್ಲಿ ರಾಸಾಯನಿಕಗಳಿರುತ್ತದೆ. ಇದು  ದೇಹ ಪ್ರವೇಶಿಸಿದರೆ  ದೇಹದಲ್ಲಿ ಹಲವು ಬದಲಾವಣೆಗಳಾಗುತ್ತದೆ.  ಜೊತೆಗೆ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.

ಅಲ್ಲದೇ ನೈಲ್ ಪಾಲಿಶ್‌ನಲ್ಲಿ ಸ್ಪಿರಿಟ್  ಬಳಸುತ್ತಾರೆ. ಇದು ಶ್ವಾಸಕೋಶದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ. ಇದರಿಂದ ನೀವು ಉಸಿರಾಟದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ನೈಲ್ ಪಾಲಿಶ್ ಅನ್ನು ಅಗತ್ಯವಿದ್ದಾಗ ಮಾತ್ರ ಬಳಸಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!