ಎಲ್ಲವೂ ಮಾಮೂಲಿ ಹಾಗೆಯೇ ಇದೆ, ಇದ್ದಕ್ಕಿದ್ದಂತೆಯೇ ಯಾಕೋ ಒಂಥರಾ ಬೇಸರ, ಏನು ಮಾಡೋದಕ್ಕೂ ಎನರ್ಜಿ ಇಲ್ಲ. ನಾನು ಬೇರೆ ಜಗತ್ತಿನಲ್ಲಿ ಇದ್ದೀನಿ, ಲೈಫ್‌ನಲ್ಲಿ ಎಕ್ಸೈಟ್‌ಮೆಂಟ್ ಇಲ್ಲ. ನನಗೆ ಡಿಪ್ರೆಷನ್ ಕಾಡ್ತಾ ಇದೆಯಾ? ಇನ್ನಿತರ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಾ ಇದ್ದರೆ ಒಂದು ಬಾರಿ ಬ್ಲಡ್ ಟೆಸ್ಟ್ ಮಾಡಿಸಿ. ನಿಮ್ಮ ದೇಹದಲ್ಲಿ d3 ಇಲ್ಲ ಎಂದು ಅರ್ಥ. ಇನ್ಯಾವ ಲಕ್ಷಣಗಳಿವೆ ನೋಡಿ..
ಮೂಳೆಗಳು ನೋವಾಗುತ್ತವೆ. ಬೆನ್ನು ಮೂಳೆ ನೋವಾಗಿ ಇಡೀ ದೇಹದ ಎಲ್ಲ ಮೂಳೆಗಳಿಗೂ ಸಮಸ್ಯೆ ಇದೆಯೇನೋ ಎಂದು ಭಾಸವಾಗುತ್ತದೆ.
ಇಡೀ ದೇಹ ನೋವು, ಮೆಟ್ಟಿಲು ಹತ್ತೋಕೂ ನೋವು, ಚೇರ್‌ನಿಂದ ಇಳಿಯೋಕು ನೋವು. ಒಟ್ಟಾರೆ ಮಸಲ್ ಸ್ಟ್ರೆಂಥ್ ಇಲ್ಲದಂತೆ ಭಾಸವಾಗುತ್ತದೆ.
ಈ ಸಮಯದಲ್ಲಿ ಮೂಳೆ ಮುರಿತದ ಚಾನ್ಸಸ್ ಹೆಚ್ಚಿದೆ.
ಸಣ್ಣ ಪುಟ್ಟ ಗಾಯಗಳಾದರೂ ವಾಸಿಯಾಗೋಕೆ ದಿನಗಳೇ ಬೇಕಾಗುತ್ತದೆ.
ಮಾನಸಿಕ ಆರೋಗ್ಯ ಹದಗೆಡುತ್ತದೆ. ದುಃಖ, ಆಂಕ್ಸೈಟಿ, ಒತ್ತಡ ಹಾಗೂ ಖಿನ್ನತೆಯ ಲಕ್ಷಣಗಳು ಕಾಣಿಸುತ್ತವೆ.
ಯಾರಿಗೂ ಹೇಳೋಕಾಗದ ರೀತಿಯ ಸುಸ್ತು, ಯಾವ ಕೆಲಸದ ಮೇಲೂ ಇಂಟ್ರೆಸ್ಟ್ ಇಲ್ಲದೇ ಇರುವುದು ಕೂಡ d3 ಕೊರತೆಯ ಲಕ್ಷಣವಾಗಿದೆ.



