ಎಲ್ಲಾದಕ್ಕೂ ನೆಗೆಟೀವ್ ಆಗಿಯೇ ಆಲೋಚನೆ ಮಾಡ್ತೀರಾ? ಹಾಗಿದ್ರೆ ನೀವಿದನ್ನು ಓದಲೇ ಬೇಕು..

ಎಂದಾದರೂ ಯೋಚಿಸಿದ್ದೀರಾ ನಿಮ್ಮ ಆಲೋಚನೆಗಳ ಬಗ್ಗೆ? ಒಂದು ವಿಷಯವನ್ನು ನೀವು ಹೇಗೆ ತೆಗೆದುಕೊಳ್ಳುತ್ತೀರಿ? ಉದಾಹರಣೆಗೆ ಒಂದು ಕೆಲಸ ಮಾಡಲು ನೀವು ಹೆಚ್ಚು ಸಮಯತೆಗೆದುಕೊಂಡಾಗ ನಿಮ್ಮ ಸೀನಿಯರ್ ನಿಮ್ಮನ್ನು ಬೈಯಬಹುದು. ಆಗ ನೀವೇನು ಮಾಡುತ್ತೀರ? ಎರಡು ದಾರಿಯಿದೆ, ಇವರ‍್ಯಾರು ನನಗೆ ಬಯ್ಯೋದಕ್ಕೆ? ಎಲ್ಲಾ ಹುಟ್ಟುತ್ತಾನೇ ಕಲಿತುಕೊಂಡು ಬರೋದಿಲ್ಲ ಎಂದು ಯೋಚಿಸಬಹುದು ಅಥವಾ ಹೌದು ಇದು ನನಗೇಕೆ ತಿಳಿದಿಲ್ಲ. ಇದನ್ನು ನಾನು ಕಲಿಯಬೇಕು, ಹೇಳಿಕೊಡಿ ಎಂದು ವಾಪಾಸ್ ಕೇಳೋದು..

ಈ ಎರಡನೇ ದಾರಿ ನಿಮ್ಮನ್ನು ದೂರ ಕರೆದುಕೊಂಡು ಹೋಗುತ್ತದೆ. ಒಂದನೆಯದು ಕ್ಷಣಕ್ಕೆ ಮನಸ್ಸಿಗೆ ಸಮಾಧಾನ ನೀಡಿ, ಕೆಟ್ಟ ಶಕ್ತಿಯಾಗಿ ನಿಮ್ಮೊಳಗೆ ಉಳಿದು ಬಿಡುತ್ತದೆ. ಎಲ್ಲಾ ವಿಷಯಕ್ಕೂ ಅಡ್ಡಗಾಲು ಹಾಕೋದು, ಒಳ್ಳೆಯದು ಆಗಲ್ಲ ಎಂದು ಡೀಮೋಟಿವೇಟ್ ಆಗುವುದು ಇದೆಲ್ಲಾ ನಮ್ಮ ನಕಾರಾತ್ಮಕ ಆಲೋಚನೆಗಳೇ. ಇದರಿಂದ ದೂರ ಆಗೋದಕ್ಕೆ ಈ ವಿಷಯಗಳು ಸಹಾಯ ಮಾಡಬಹುದು..

  • ನಿಮ್ಮ ಆಲೋಚನೆಗಳನ್ನು ಇನ್ನೊಬ್ಬರ ಬಳಿ ಹೇಳುವ ಮುನ್ನ ಅದರ ಎಲ್ಲಾ ಆಯಾಮಗಳನ್ನು ನೀವೇ ಒಮ್ಮೆ ಯೋಚಿಸಿ.
  • ಪ್ರತೀ ವಿಷಯದಲ್ಲಿ ಮೊದಲು ಒಳ್ಳೆಯದನ್ನೇ ಹುಡುಕಿ ಅದರ ಮೇಲಷ್ಟೇ ಗಮನ ಇರಲಿ.
  • ನಿಮ್ಮ ಮನಸ್ಸಿನ ಎಲ್ಲ ಭಾವನೆಗಳನ್ನು ಪದದ ರೂಪಕ್ಕೆ ಇಳಿಸಿ, ಅನಿಸಿದ್ದನ್ನು ಬರೆದುಬಿಡಿ.
  • ನಿಮ್ಮ ಭಾವನೆ ಯಾವುದು? ಭಯ, ಪ್ರೀತಿ, ಸಿಕ್ಸ್ತ್ ಸೆನ್ಸ್ ಹೀಗೆ ನಿಮ್ಮೊಳಗಿನ ಅನುಭವ ಯಾವುದು ಮೊದಲು ತಿಳಿಯಿರಿ.
  • ಮನಸ್ಸಿನಲ್ಲಿ ಹೆಚ್ಚು ಅಂದುಕೊಂಡಿದ್ದೇ ನಿಜವೂ ಆಗುತ್ತದಂತೆ, ಹೆಚ್ಚಾಗಿ ಒಳ್ಳೆಯದನ್ನೇ ಅಂದುಕೊಳ್ಳಿ.
  • ಅಶ್ವಿನಿ ದೇವತೆಗಳು ಎಲ್ಲದಕ್ಕೂ ಅಸ್ತು ಎನ್ನುತ್ತಾರಂತೆ, ಕೆಟ್ಟದ್ದಕ್ಕೂ ಅಸ್ತು ಎಂದುಬಿಡಬಹುದಲ್ವಾ, ಸದಾ ಪಾಸಿಟಿವ್ ಮಾತುಗಳನ್ನು ಆಡಿ.
  • ಪಾಸಿಟಿವ್ ವ್ಯಕ್ತಿಗಳು ನಿಮ್ಮ ಸುತ್ತಮುತ್ತ ಇರುವುದು ಒಳ್ಳೆಯದು. ಇಂದು ಆಫೀಸ್‌ಗೆ ರಜೆ ಹಾಕು, ಯಾಕೋ ಕೆಟ್ಟದಾಗುತ್ತದೆ ಎನಿಸುತ್ತಿದೆ ಎಂದು ಒಬ್ಬರು ಹೇಳಿದಾಗ, ಅದಕ್ಕೆ ಯಾರಾದರೂ ಹೌದು, ನನಗೂ ಹಾಗೇ ಅನಿಸುತ್ತಿದೆ ಎಂದರೆ ನಿಮ್ಮ ಕಾನ್ಫಿಡೆನ್ಸ್ ಲೆವೆಲ್ ಹೋಗಿಬಿಡುತ್ತದೆ.
  • ಸದಾ ಖುಷಿಯಾಗಿರಿ. ದೇವರು ನಿಮಗೆ ಕೊಟ್ಟಿರುವ ಎಲ್ಲ ವಿಷಯಗಳನ್ನು ಆನಂದಿಸಿ. ನಿಮ್ಮಂತೆ ಬದುಕುವುದು ಎಷ್ಟೋ ಜನರ ಕನಸಿರಬಹುದು. ಯೋಚಿಸಿ.
  • ನಿಮಗೆ ಯಾವುದೇ ವ್ಯಕ್ತಿಯಿಂದ ಬರೀ ಪಾಸಿಟಿವ್ ವೈಬ್ಸ್ ಮಾತ್ರ ಕಾಣುತ್ತದೆ ಎಂದರೆ ಅವರೊಂದಿಗೆ ಹೆಚ್ಚು ಬೆರೆಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!