WHY? | ಪ್ರತಿದಿನ ಮಧ್ಯರಾತ್ರಿ ಒಂದೇ ಸಮಯಕ್ಕೆ ಎಚ್ಚರ ಆಗತ್ತಾ? ಈ ಸಮಸ್ಯೆ ಖಂಡಿತ..

ಎಷ್ಟೋ ಮಂದಿಗೆ ನಿದ್ದೆಯಿಂದ ಇದ್ದಕ್ಕಿದ್ದಂತೆಯೇ ಎಚ್ಚರ ಆಗಿಬಿಡುತ್ತದೆ. ಮೊಬೈಲ್‌ ಅಥವಾ ಗಡಿಯಾರ ನೋಡಿದ್ರೆ ಸಮಯ ಮಧ್ಯರಾತ್ರಿ ಎರಡು ಗಂಟೆ ಆಗಿರುತ್ತದೆ. ಪ್ರತೀ ದಿನ ಇದೇ ಸಮಯಕ್ಕೆ ಎಚ್ಚರ ಆಗಿಬಿಡುತ್ತದೆ ಅನ್ನೋ ತಲೆನೋವು ನಿಮ್ಮನ್ನು ಕಾಡುತ್ತದೆ.

ವಾಶ್‌ರೂಮ್‌ಗೆ ಹೋಗಿ ಬಂದು ಮಲಗಲು ಯತ್ನಿಸಿದ್ರೆ ಎಷ್ಟೊತ್ತಾದ್ರೂ ನಿದ್ದೆನೇ ಬರೋದಿಲ್ಲ. ದಿನಾ ಇದೇ ಸಮಯಕ್ಕೆ ಎಚ್ಚರ ಯಾಕೆ ಆಗುತ್ತದೆ ಅನ್ನೋ ಪ್ರಶ್ನೆ ತಲೆಯಲ್ಲಿ ಹೊಕ್ಕಿರುತ್ತದೆ. ಇದಕ್ಕೆ ಕಾರಣ ಇನ್ಸೋಮ್ನಿಯಾ, ಒತ್ತಡ, ವಯಸ್ಸಾಗುವುದು, ಹಾರ್ಮೋನ್‌ ಬದಲಾವಣೆ, ಅದಕ್ಕೆ ಸೇವಿಸುವ ಮಾತ್ರೆಗಳು ಆಗಿರಬಹುದು.

ಇದಕ್ಕೆ ಬೆಸ್ಟ್‌ ಸೊಲ್ಯೂಷನ್‌ ಎಂದರೆ ನಿಮ್ಮ ರೂಮ್‌ನ ಗಡಿಯಾರವನ್ನು ಎತ್ತಿಡಿ, ಮೊಬೈಲ್‌ ಬೆಡ್‌ಮೇಲೆ ಇಟ್ಟುಕೊಳ್ಳಬೇಡಿ. ಸಮಯ ಎಷ್ಟು ಎಂದು ತಿಳಿಯುವುದೇ ಬೇಡ. ಮಧ್ಯರಾತ್ರಿ ಒಂದೇ ಸಮಯಕ್ಕೆ ಎಚ್ಚರ ಎಂದರೆ ಯಾವುದಾದರೂ ನೆಗೆಟಿವ್‌ ಶಕ್ತಿ ಇರಬೇಕು ಅನ್ನೋ ಭಾವನೆಗಳೇ ಬೇಡ. ಸಮಯದ ಅರಿವಿಲ್ಲದಂತೆ ಹಾಯಾಗಿ ಮಲಗಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!