ಮಕ್ಕಳ ಬೆಳವಣಿಗೆಗೆ ಅವರು ತಿನ್ನುವ ಆಹಾರ ಅತೀ ಅವಶ್ಯಕವಾಗಿದೆ. ರಾತ್ರಿ ಸಮಯ ಮಕ್ಕಳಿಗೆ ಯಾವ ಊಟ ನೀಡಬೇಕು ಎಂದು ಯೋಚ್ನೆ ಮಾಡ್ತಿದ್ರೆ ಇದನ್ನು ಸಂಪೂರ್ಣವಾಗಿ ಓದಿ..
ರಾತ್ರಿಯ ಸಮಯದಲ್ಲಿ ಹಾಲು ನೀಡುವುದರಿಂದ ಸುಖವಾದ ನಿದ್ರೆಯನ್ನು ಪಡೆಯುತ್ತಾರೆ. ಹೌದು, ಹಾಲಿನಲ್ಲಿ ಟ್ರಿಪ್ಟೊಫಾನ್, ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ಮೆಲಟೋನಿನ್ ಇದೆ. ಇವು ನಿದ್ರೆಯನ್ನು ಉತ್ತೇಜಿಸುತ್ತದೆ. ಮಲಗುವ ವೇಳೆಯಲ್ಲಿ ಹಾಲು ಕುಡಿಯುವುದರಿಂದ ಅವರ ದೀರ್ಘಾವಧಿಯವರೆಗೆ ಹೊಟ್ಟೆ ತುಂಬಿದ ಭಾವನೆಯನ್ನು ಹೊಂದಿರುತ್ತಾರೆ.
ರಾತ್ರಿಯ ವೇಳೆಯಲ್ಲಿ ಕೂಡ ಬಾದಾಮಿಯನ್ನು ಮಕ್ಕಳಿಗೆ ತಿನ್ನಲು ನೀಡಬಹುದು ಅಥವಾ ಬಾದಾಮಿ ಮಿಶ್ರಿತ ಹಾಲನ್ನು ಕುಡಿಯಲು ಕೊಡಬಹುದು.
ದಿನದ 24 ಗಂಟೆಗಳಲ್ಲಿ ಯಾವುದೇ ಸಮಯದಲ್ಲಿಯಾದರೂ ಬಾಳೆಹಣ್ಣುಗಳನ್ನು ತಿನ್ನಬಹುದು. ಇದನ್ನು ಸೂಪರ್ ಫುಡ್‌ಗಳೆಂದೇ ಕರೆಯುತ್ತಾರೆ. ಅಯೋಡಿನ್‌ನಂತಹ ಅಗತ್ಯ ಖನಿಜಗಳಿಂದ ಸಮೃದ್ಧವಾಗಿರುವ ಬಾಳೆಹಣ್ಣುಗಳು ಮೆಗ್ನೀಸಿಯಮ್, ಪೊಟ್ಯಾಸಿಯಮ್, ಟ್ರಿಪ್ಟೊಫಾನ್, ವಿಟಮಿನ್ ಬಿ 6 ಮತ್ತು ಫೈಬರ್‌ಗಳಲ್ಲಿ ಸಮೃದ್ಧವಾಗಿವೆ.
ದ್ವಿದಳ ಧಾನ್ಯಗಳು ಸಾಮಾನ್ಯವಾಗಿ ರಾತ್ರಿಯ ವೇಳೆ ಹೊಟ್ಟೆ ತುಂಬಿದ ಅನುಭವವನ್ನು ಉಂಟು ಮಾಡುತ್ತದೆ. ಏಕೆಂದರೆ ಇದರಲ್ಲಿ ಹೆಚ್ಚಿನ ಮಟ್ಟದ ಪ್ರೋಟೀನ್ ಮತ್ತು ಟ್ರಿಪ್ಟೊಫಾನ್ ಹೊಂದಿರುತ್ತದೆ. ಇದನ್ನು ಉತ್ತಮ ನಿದ್ರೆಗೆ ಅತ್ಯುತ್ತಮ ಆಹಾರ ಎಂದು ಪರಿಗಣಿಸಲಾಗಿದೆ.