ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಲಾಸ್ ಏಂಜಲಿಸ್ನ ಹಾಲಿವುಡ್ ಬೆಟ್ಟದಲ್ಲಿ ನಡೆದ ಶತಮಾನದ ಭೀಕರ ಕಾಳ್ಗಿಚ್ಚು ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಇಲ್ಲಿ ಮನೆ ಮಾಡಿಕೊಂಡಿದ್ದ ನಟಿ ಪ್ರೀತಿ ಝಿಂಟಾ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ನಾನು ಇನ್ನೊಂದು ದಿನವನ್ನು ನೋಡುತ್ತೇನೆ ಎಂದುಕೊಂಡೇ ಇರಲಿಲ್ಲ. ನಾನು ಬದುಕಿದ್ದು ನಿಜಕ್ಕೂ ಪವಾಡ. ನನ್ನನ್ನು ಬದುಕಿಸಿದ ಅಗ್ನಿಶಾಮಕ ಸಿಬ್ಬಂದಿಗೆ ಸದಾ ಋಣಿಯಾಗಿರುತ್ತೇನೆ ಎಂದು ಹೇಳಿದ್ದಾರೆ.
ಇಂಥ ಭೀಕರ ದಿನ ಬರುತ್ತೆ ಅಂತ ಕನಸು ಮನಸಿನಲ್ಲಿಯೂ ಯೋಚನೆ ಮಾಡಿಯೇ ಇರಲಿಲ್ಲ. ನನ್ನ ಅಕ್ಕಪಕ್ಕದವರು ಈ ಪರಿಯ ಸಂಕಷ್ಟಕ್ಕೆ ಸಿಲುಕುತ್ತಾರೆ ಎನ್ನುವುದು ನೆನೆಸಿಕೊಳ್ಳಲೂ ಆಗುವುದಿಲ್ಲ. ಇಂಥ ಅಗ್ನಿ ದುರಂತದಿಂದ ನಾನು ಕೂಡ ಬದುಕಿರುವುದೇ ಪವಾಡ. ಆ ದೇವರೇ ನಮ್ಮನ್ನು ಕಾಪಾಡಿದ್ದಾನೆ. ಪ್ರತಿಯೊಬ್ಬರೂ ಸುರಕ್ಷಿತವಾಗಿರಲಿ ಎನ್ನುವುದೇ ನನ್ನ ಆಶಯ ಎಂದಿದ್ದಾರೆ.