KITCHEN TIPS| ಬಹುಕಾಲ ಹಪ್ಪಳ ಕೆಡದಂತೆ ಇಡಬೇಕಾ? ಹೀಗೆ ಮಾಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಸಿಗೆ ಬಂತೆಂದರೆ ಹಪ್ಪಳದ್ದೇ ಸದ್ದು…ಸೀಸನ್ನು…ಇವತ್ತು ಅವಲಕ್ಕಿ ಹಪ್ಪಳ ಮಾಡೋದು ಹೇಗೆ ಅಂತ ನೋಡೋಣ.

ಮೀಡಿಯಂ ಅವಲಕ್ಕಿಯನ್ನು ಬಿಸಿಲಿನಲ್ಲಿಟ್ಟು ಅಥವಾ ಒಲೆಯ ಮೇಲೆ ನಾಲ್ಕು ಸುತ್ತು ಹುರಿದರೆ ಗರಿಗರಿಯಾಗುತ್ತವೆ. ನಂತರ ಮಿಕ್ಸರ್ ನಲ್ಲಿ ಹಾಕಿ ನುಣ್ಣಗೆ ಪೌಡರ್ ಮಾಡಿಕೊಂಡು ಜರಡಿ ಹಿಡಿಯಬೇಕು.

ಒಲೆಯ ಮೇಲೆ ದಪ್ಪ ಬಾಣಲೆ ಇಟ್ಟು ಒಂದು ಲೋಟ ಅವಲಕ್ಕಿ ಹಿಟ್ಟಿಗೆ ಒಂದೂವರೆ ಲೋಟದನುಪಾತದಲ್ಲಿ ನೀರು ಹಾಕಿ. ಅದಕ್ಕೆ ಒಂದು ಟೀ ಚಮಚ ಉಪ್ಪು, ಅರ್ಧ ಟೀ ಚಮಚ ಇಂಗು, ಒಂದು ಟೀ ಚಮಚ ಎಣ್ಣೆ ಹಾಕಿ ಪೌಡರ್ ಮಾಡಿಟ್ಟುಕೊಂಡ ಅವಲಕ್ಕಿ ಪುಡಿಯನ್ನು  ಬಿಸಿಯಾದ ನೀರಿನಲ್ಲಿ ಹಾಕಿ ಗಂಟಾಗದಂತೆ ಚೆನ್ನಾಗಿ ಕೈಯಾಡಿಸಬೇಕು.

ಈಗ ಉರಿ ಕಡಿಮೆ ಮಾಡಿಕೊಳ್ಳಬೇಕು. ಚೆನ್ನಾಗಿ ಕೈ ಆಡಿಸಿ ಗಟ್ಟಿಯಾದ ಮೇಲೆ  ಸ್ವಲ್ಪ ಹೊತ್ತು ಬಿಡಿ. ಹದವಾದ ಹಿಟ್ಟನ್ನು ನಂತರ ಬೇರೆ ಪ್ಲೇಟಿಗೆ ಹಾಕಿಕೊಂಡು ಬೆಚ್ಚಗಿರುವಾಗಲೇ ಕೈ ಒದ್ದೆಮಾಡಿಕೊಂಡು ಚೆನ್ನಾಗಿ ನಾದಬೇಕು. ನಾದುವಾಗ ಯಾವ ಕಾರಣಕ್ಕೂ ಎಣ್ಣೆ ಹಾಕಬಾರದು. ಎಣ್ಣೆ ಹಾಕುವುದರಿಂದ ದಿನಗಳೆದಂತೆ ಮುಗ್ಗಲು ವಾಸನೆ ಬರುವ ಸಾಧ್ಯತೆಯಿದೆ. ನಂತರ ಹಪ್ಪಳದ ಚಿಕ್ಕ ಚಿಕ್ಕ  ಉಂಡೆಯನ್ನು ಮಾಡಿ ಹಪ್ಪಳ ಒತ್ತಿಕೊಳ್ಳಬಹುದು. ಹಪ್ಪಳವನ್ನು ಬಿಳಿಪೇಪರ್‌ ಮೇಲೆ ಹರವಿ ಆರಲು ಬಿಡಿ. ಮರುದಿನ ಬಿಸಿಲು ಅಥವಾ ಡ್ರೈಯರ್‌ ಮೂಲಕ ಒಣಗಿಸಿದರೆ ವರ್ಷಗಟ್ಟಲೆ ಹಾಳಾಗದಂತೆ ಕಾಪಾಡಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!