ಹೆಬ್ಬಾಳ ಸಂಘರ್ಷ- ಇದು ಸಿದ್ದರಾಮಯ್ಯ ಬೆಂಬಲಿಗರದ್ದೇ ಗೂಂಡಾಗಿರಿ ಎಂದ ಕಟ್ಟಾ

ಹೊಸದಿಗಂತ ವರದಿ ಬೆಂಗಳೂರು:

ಬೆಂಗಳೂರಿನ ಜನತೆ ಶಾಂತಿ ಬಯಸುತ್ತಾರೆ. ದೌರ್ಜನ್ಯ ಸಹಿಸುವುದಿಲ್ಲ. ಜನತೆ ಅವರಿಗೆ 8 ದಿನಗಳಲ್ಲಿ ಪಾಠ ಕಲಿಸುತ್ತಾರೆ ಎಂದು ರಾಜ್ಯದ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ತಿಳಿಸಿದರು. ಹಿಂದಿನ ನಮ್ಮ ಕೆಲಸ ಗಮನಿಸಿ ನಮ್ಮ ಯುವ ಅಭ್ಯರ್ಥಿಗೇ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ನಗರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಬ್ಬಾಳದ ಎಂಎಲ್‍ಎ ಸಿದ್ದರಾಮಯ್ಯನವರ ಚೇಲಾ. ಬೇರೆ ಸಮುದಾಯದವರನ್ನು ಅವಮಾನ ಮಾಡಿದ್ದಾರೆ. ಎಲ್ಲರ ಮೇಲೆ ಕೇಸು ಹಾಕುವ ಚಟ. ರೌಡಿಸಂ ಮಾಡಿ ಹೆದರಿಸುತ್ತಾರೆ. ರಾಕ್ಷಸಿ ಸ್ವಭಾವ, ದೌರ್ಜನ್ಯ ಪ್ರವೃತ್ತಿ ಅವರದು ಎಂದು ಟೀಕಿಸಿದರು.

ದಬ್ಬಾಳಿಕೆಗೆ ಪೊಲೀಸರ ಶ್ರೀರಕ್ಷೆ: ದಬ್ಬಾಳಿಕೆಗೆ ಪೊಲೀಸರ ಶ್ರೀರಕ್ಷೆ ಇದೆ ಎಂದು ಅವರು ಆರೋಪಿಸಿದರು. ಜಗಳ ಮಾಡುವುದು ಸರಿಯಲ್ಲ ಎಂದು ಸುಮ್ಮನಿದ್ದೇವೆ ಎಂದು ತಿಳಿಸಿದರು. ಎಂಎಲ್‍ಎ, ಗುತ್ತಿಗೆದಾರ, ಅಧಿಕಾರಿಗಳ ಪಾಲುದಾರಿಕೆಯಲ್ಲಿ ಜನರಿಗೆ ಸಮಸ್ಯೆ ಆಗಿದೆ ಎಂದು ದೂರಿದರು.

ಆಟೋ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ: ಕೋವಿಡ್ ಅವಧಿಯಿಂದ 10 ಸಾವಿರ ಮಕ್ಕಳಿಗೆ ಸ್ಕಾಲರ್‍ಶಿಪ್ ಕೊಡಲಾಗಿದೆ. ಅವರನ್ನು ದತ್ತು ಪಡೆಯಲಾಗಿದೆ. ತಿಂಗಳಿಗೊಮ್ಮೆ ಶನಿವಾರ ಸಂತೆ ದವಸ ಧಾನ್ಯ ಮಾಡಲಿದ್ದೇವೆ. ಆಟೋ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದು ಪ್ರಣಾಳಿಕೆ ಬಿಡುಗಡೆ ಮಾಡಿ ಅವರು ವಿವರ ನೀಡಿದರು.

ಬಿಜೆಪಿ ಸಾಧನೆ: ರಸ್ತೆಗಳ ಅಗಲೀಕರಣ ಕೆಲಸವನ್ನು ಮಾಡಲಿದ್ದೇವೆ. 27 ಪಾರ್ಕ್‍ಗಳನ್ನು ಹಿರಿಯರು ಉತ್ತಮವಾಗಿ ಬಳಸಲು ಅಭಿವೃದ್ಧಿ ಮಾಡುತ್ತೇವೆ. ಕುಂತಿ ಬೆಟ್ಟವನ್ನು ಆಲಮಟ್ಟಿ ಮಾದರಿಯಲ್ಲಿ ಯಾತ್ರಾಸ್ಥಳವಾಗಿ ಪರಿವರ್ತನೆ ಮಾಡುತ್ತೇವೆ. ನಾಡಪ್ರಭು ಕೆಂಪೇಗೌಡರ 99 ಅಡಿ ಪ್ರತಿಮೆಯನ್ನು ಹೆಬ್ಬಾಳ ಕ್ಷೇತ್ರದಲ್ಲಿ ಸ್ಥಾಪಿಸುತ್ತೇವೆ. ಅಂಬೇಡ್ಕರ್, ಬಸವಣ್ಣನವರ ಪ್ರತಿಮೆಯನ್ನೂ ಸ್ಥಾಪಿಸುತ್ತೇವೆ.

ಕೌಶಲ್ಯ ತರಬೇತಿ: ಪ್ರತಿ ವಾರ್ಡಿನ 500 ಯುವಜನರಿಗೆ ಕೌಶಲ್ಯ ತರಬೇತಿ ಕೊಡಿಸಲಿದ್ದೇವೆ. ಉಚಿತ ಡಯಾಲಿಸಿಸ್ ಸೆಂಟರ್ ತೆರೆಯುವುದು, ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಈಡೇರಿಸಲಿದ್ದೇವೆ. 5 ವರ್ಷಗಳಲ್ಲಿ ವಿವಿಧ ಅಂಶಗಳನ್ನು ಈಡೇರಿಸುತ್ತೇವೆ ಎಂದರು. ಬಿಬಿಎಂಪಿ ಮಾಜಿ ಸದಸ್ಯರಾದ ಜಯಪ್ಪ ರೆಡ್ಡಿ ಮತ್ತು ನಾಗರಾಜು ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!