ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿಮಗೆ ನೀರು ಬೇಕಿದ್ದರೆ ನಮ್ಮ ಷರತ್ತಿಗೆ ಒಪ್ಪಿ ಈ ರೀತಿ ಹೇಳಿದ್ದು ಇಸ್ರೇಲ್ .
ಗಾಜಾದಲ್ಲಿ ಒತ್ತೆಯಾಳಾಗಿರಿಸಿಕೊಂಡಿರುವವರನ್ನು ಬಿಡುಗಡೆ ಮಾಡುವವರೆಗೂ ನೀರು ಸೇರಿದಂತೆ ಯಾವ ಮೂಲಭೂತ ಸೌಕರ್ಯಗಳೂ ನಿಮಗೆ ಸಿಗುವುದಿಲ್ಲ ಎಂದು ಇಸ್ರೇಲ್ ಹಮಾಸ್ ಉಗ್ರರಿಗೆ ಖಡಕ್ ಎಚ್ಚರಿಕೆ ನೀಡಿದೆ.
ಇಸ್ರೇಲಿಯನ್ನರು ವಾಪಸ್ ಬರುವವರೆಗೂ ವಿದ್ಯುತ್ ಕೂಡ ಇರುವುದಿಲ್ಲ, ನೀರು ಬಿಡುವುದಿಲ್ಲ, ಯಾವ ಮೂಲಭೂತ ಸೌಕರ್ಯಗಳೂ ದೊರೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.
ಶನಿವಾರದಂದು ಹಮಾಸ್ ಉಗ್ರರು ದಾಳಿ ನಡೆಸಿದ ಸಂದರ್ಭದಲ್ಲಿ 150 ಮಂದಿ ಇಸ್ರೇಲಿಗಳನ್ನು ಒತ್ತೆಯಾಳಾಗಿರಿಸಿಕೊಂಡಿದ್ದಾರೆ. ಇಸ್ರೇಲ್ ಸುತ್ತಮುತ್ತಲ ಪ್ರದೇಶಗಳಲ್ಲಿ 3 ಸಾವಿರಕ್ಕೂ ಹೆಚ್ಚು ಮಂದಿಯನ್ನು ಹಮಾಸ್ ಉಗ್ರರು ಕೊಂದಿದ್ದಾರೆ.
ಇಸ್ರೇಲ್(Israel) ಹಮಾಸ್ ಉಗ್ರರ ವಾಸದಲ್ಲಿದ್ದ ಗಾಜಾ ಗಡಿಯನ್ನು ಹಿಂಪಡೆಯುವಲ್ಲಿ ಯಶಸ್ವಿಯಾಗಿದೆ.
ಅಕ್ಟೋಬರ್ 10 ರಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹಮಾಸ್ಗೆ ಎಚ್ಚರಿಕೆ ನೀಡಿದ್ದರು. ಇಸ್ರೇಲ್ ಮೇಲೆ ದಾಳಿ ನಡೆಸುವ ಮೂಲಕ ಹಮಾಸ್ ಉಗ್ರರು ದೊಡ್ಡ ತಪ್ಪು ಮಾಡಿದ್ದಾರೆ. ಹಮಾಸ್ ಹಾಗೂ ಇತರೆ ಇಸ್ರೇಲ್ನ ಶತ್ರುಗಳು ಜೀವಮಾನಪೂರ್ತಿ ನೆನಪಿಸಿಕೊಳ್ಳುವಂತಹ ಬೆಲೆಯನ್ನು ತೆರಬೇಕಾಗುತ್ತದೆ. ನಾವು ಯುದ್ಧವನ್ನು ಪ್ರಾರಂಭಿಸಿಲ್ಲ ಆದರೆ ಅಂತ್ಯ ನಮ್ಮ ಕೈಯಿಂದಲೇ ಆಗುತ್ತದೆ ಎಂದು ನೇತನ್ಯಾಹು ಹೇಳಿದ್ದರು.