September 21, 2026
Monday, September 21, 2026
spot_img

ಐಸಿಯುನಲ್ಲಿದ್ದ ರೋಗಿ ಮೇಲೆ ಹಲ್ಲೆ ಮಾಡಿದ ವೈದ್ಯ! ಈ ಡಾಕ್ಟರ್‌ಗ್ಯಾಕೆ ವೃದ್ಧ ಪೇಷೆಂಟ್‌ ಮೇಲೆ ದ್ವೇಷ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹರಿಯಾಣ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಯೊಂದರ ಐಸಿಯು ವಾರ್ಡ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಚಿಕಿತ್ಸೆ ನೀಡಬೇಕಾದ ಕೈಗಳೇ ವೃದ್ಧ ರೋಗಿಯ ಎದೆಯನ್ನು ಅಪ್ಪಳಿಸಿರುವ ಆಘಾತಕಾರಿ ವಿಡಿಯೋ ಈಗ ಬಹಿರಂಗಗೊಂಡಿದೆ.

ವೈದ್ಯರೊಬ್ಬರು ವೃದ್ಧ ರೋಗಿಯಿದ್ದ ಹಾಸಿಗೆಯ ಬಳಿ ಬಂದು ಮೊದಲು ಸುತ್ತಲೂ ಕಣ್ಗಾವಲು ಕ್ಯಾಮೆರಾ ಎಲ್ಲಿವೆ ಎಂದು ಗಮನಿಸುತ್ತಾನೆ. ನಂತರ ಯಾರಿಗೂ ಕಾಣದಂತೆ ಹಾಸಿಗೆಯ ಸುತ್ತಲಿನ ಪರದೆಗಳನ್ನು ಎಳೆದು, ಹಾಸಿಗೆಯ ಮೇಲಿದ್ದ ಅಸಹಾಯಕ ವೃದ್ಧ ರೋಗಿಯ ಎದೆಗೆ ತನ್ನ ಮೊಣಕೈಯಿಂದ ಬಲವಾಗಿ ಗುದ್ದಿ ಹಲ್ಲೆ ನಡೆಸಿದ್ದಾನೆ.

ವೃದ್ಧ ರೋಗಿಯು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರೆ, ಆತನನ್ನು ಆರೈಕೆ ಮಾಡಬೇಕಾದ ವೈದ್ಯನು ತನ್ನ ಕೋಪವನ್ನು ಅಥವಾ ವಿಕೃತಿಯನ್ನು ರೋಗಿಯ ಮೇಲೆ ತೀರಿಸಿಕೊಂಡಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !