ಮಹಿಳೆ ಹೊಟ್ಟೆಯೊಳಗೆ ಟವಲ್ ಹಾಗೇ ಬಿಟ್ಟ ವೈದ್ಯ: ದೂರು ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರಪ್ರದೇಶದ ಅಮ್ರೋಹಾದ ಬನ್ಸ್ ಖೇರಿ ಗ್ರಾಮದ ಮಹಿಳೆಯೊಬ್ಬರ ಹೊಟ್ಟೆಯಲ್ಲಿ ವೈದ್ಯರು ಟವಲ್ ಮರೆತಿದ್ದು, ಪ್ರಕರಣ ದಾಖಲಾಗಿದೆ.

ನಜ್ರಾನಾ ಎನ್ನುವ ಮಹಿಳೆ ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಡಾ. ಮತ್ಲೂಬ್ ಅನುಮತಿಯಿಲ್ಲದೆ ನಡೆಸುತ್ತಿದ್ದ ಸೈಫಿ ನರ್ಸಿಂಗ್ ಹೋಮ್‌ನಲ್ಲಿ ನಜ್ರಾನಾರನ್ನು ದಾಖಲಿಸಲಾಗಿತ್ತು.

ವೈದ್ಯರು ಆಪರೇಷನ್ ನಂತರ ನಿರ್ಲಕ್ಷ್ಯದಿಂದ ಹೊಟ್ಟೆಯೊಳಗೆ ಟವಲ್ ಮರೆತಿದ್ದರು. ನಜ್ರಾನಾಗೆ ಹೊಟ್ಟೆನೋವು ಹೆಚ್ಚಾಗಿದ್ದು, ಅದೇ ಆಸ್ಪತ್ರೆಗೆ ಮತ್ತೆ ತೆರಳಿದ್ದರು. ಅಲ್ಲಿನ ವೈದ್ಯರು ಕಾರಣ ಹೇಳದೇ ಐದು ದಿನ ಅಡ್ಮಿಟ್ ಮಾಡಿದ್ದಾರೆ. ಹೊರಗಿನ ಚಳಿಯಿಂದ ಹೊಟ್ಟೆನೋವು ಹೆಚ್ಚಾಗುತ್ತದೆ ಎಂದು ಹೇಳಿ ಅಡ್ಮಿಟ್ ಮಾಡಿದ್ದಾರೆ.

ಮನೆಗೆ ಬಂದ ನಂತರವೂ ಹೊಟ್ಟೆನೋವು ಕಡಿಮೆಯಾಗದೇ ಇದ್ದ ಕಾರಣ ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಹೊಟ್ಟೆಯೊಳಗೆ ಟವಲ್ ಇರುವುದು ತಿಳಿದುಬಂದಿದೆ. ಆಪರೇಷನ್ ಮೂಲಕ ಟವಲ್ ಹೊರತೆಗೆಯಲಾಗಿದೆ. ಮತ್ಲೂಬ್ ಹಾಗೂ ಆಸ್ಪತ್ರೆ ವಿರುದ್ಧ ದೂರು ದಾಖಲಿಸಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಮುಖ್ಯ ವೈದ್ಯಕೀಯ ಅಧಿಕಾರಿ ರಾಜೀವ್ ಸಿಂಘಾಲ್ ಮಾತನಾಡಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಯಲಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!