Wednesday, December 6, 2023

Latest Posts

ವಿದ್ಯುತ್‌ ಕೊರತೆ: ಮೊಬೈಲ್ ಟಾರ್ಚ್‌ನಿಂದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಈ ಘಟನೆ ದೇಶದ ಸರ್ಕಾರಿ ಆಸ್ಪತ್ರೆಗಳ ದುಸ್ಥಿತಿಗೆ ಮತ್ತೊಂದು ಸಾಕ್ಷಿ. ಉತ್ತರ ಪ್ರದೇಶದ ಆಸ್ಪತ್ರೆಯೊಂದರಲ್ಲಿ ವಿದ್ಯುತ್ ಕೊರತೆಯಿಂದಾಗಿ ವೈದ್ಯರು ಮೊಬೈಲ್ ಫೋನ್ ಟಾರ್ಚ್ ಬೆಳಕಿನಲ್ಲಿ ಚಿಕಿತ್ಸೆ ನೀಡಬೇಕಾಗಿದೆ. ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಕೇಂದ್ರದಲ್ಲಿರುವ ಮುಖ್ಯ ಆಸ್ಪತ್ರೆಯಲ್ಲಿ ಕಳೆದ ಶನಿವಾರ ಈ ಘಟನೆ ನಡೆದಿದೆ.

ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಇದರಿಂದ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ವೈದ್ಯರು ತಮ್ಮ ಮೊಬೈಲ್ ಫೋನ್ ಬೆಳಕಿನಲ್ಲಿ ಚಿಕಿತ್ಸೆ ಕೊಟ್ಟಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ಇದೇ ಪರಿಸ್ಥಿತಿ ಇದೆ ಎನ್ನುತ್ತಾರೆ ಅಲ್ಲಿನ ರೋಗಿಗಳು. ಮಳೆಯಿಂದ ವಿದ್ಯುತ್ ಕಡಿತಗೊಂಡರೆ ತಕ್ಷಣ ವ್ಯವಸ್ಥೆ ಮಾಡುವ ಪರಿಸ್ಥಿತಿ ಇಲ್ಲ. ಜನರೇಟರ್ ಮತ್ತು ತುರ್ತು ದೀಪಗಳ ಅನುಪಸ್ಥಿತಿಯಲ್ಲಿ, ಮೊಬೈಲ್ ಫೋನ್‌ಗಳ ಬೆಳಕಿನಲ್ಲಿ ಚಿಕಿತ್ಸೆ ನೀಡಲಾಯಿತು. ಅಲ್ಲಿದ್ದವರೊಬ್ಬರು ಇದಕ್ಕೆ ಸಂಬಂಧಿಸಿದ ದೃಶ್ಯಗಳನ್ನು ವಿಡಿಯೋ ಮಾಡಿದ್ದು, ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಕುರಿತು ಆಸ್ಪತ್ರೆ ಪ್ರಭಾರಿ ಡಾ.ರಾಮ್ ಮಾತನಾಡಿ, ಎಲ್ಲರೂ ಹೇಳುತ್ತಿರುವ ಹಾಗೆ ಹೆಚ್ಚು ಹೊತ್ತು ವಿದ್ಯುತ್ ಕೈಕೊಟ್ಟಿಲ್ಲ. ಕೇವಲ 15-20 ನಿಮಿಷ ಮಾತ್ರ ವಿದ್ಯುತ್ ಇರಲಿಲ್ಲ. ಬಳಿಕ ಜನರೇಟರ್ ಬ್ಯಾಟರಿಗಳ ಮೂಲಕ ವಿದ್ಯುತ್ ಸರಬರಾಜು ಮಾಡಲಾಗಿದೆ. ಬ್ಯಾಟರಿಗಳನ್ನು ವಿಭಿನ್ನವಾಗಿ ಇರಿಸಿರುವುದರಿಂದ ಅವುಗಳನ್ನು ಅಳವಡಿಸಲು ಸಮಯ ಹಿಡಿಯಿತು ಎಂದು ಸಮಜಾಯಿಷಿ ಕೊಟ್ಟರು. ಈ ಘಟನೆ ಅಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿನ ಸೌಲಭ್ಯಗಳಿಗೆ ಕನ್ನಡಿ ಹಿಡಿಯುವಂತಿದೆ ಎಂದು ಟ್ರೋಲ್‌ ಆಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!