CINE | ಮಾಜಿ ಬಿಗ್‌ಬಾಸ್ ಸ್ಪರ್ಧಿಗೆ ಬಂಧನ ಭೀತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್‌ಬಾಸ್ ಸೀಸನ್ 6ರ ಸ್ಪರ್ಧಿ ಆಡಂ ಪಾಷಾ ಸುಳ್ಳು ದೂರು ನೀಡಿದ ಹಿನ್ನೆಲೆಯಲ್ಲಿ ಬಂಧನ ಭೀತಿ ಎದುರಿಸುತ್ತಿದ್ದಾರೆ.

ಓವರ್ ಸ್ಪೀಡ್‌ನಲ್ಲಿ ಲಾರಿ ಚಾಲಕನೊಬ್ಬ ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾನೆ ಎಂದು ಎಲೆಕ್ಟ್ರಾನಿಕ್ ಸಿಟಿ ಠಾಣೆಗೆ ಆಡಂ ಪಾಷಾ ದೂರು ನೀಡಿದ್ದರು.

ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಮಾಡಿದಾಗ ಇದೆಲ್ಲಾ ಆಡಂ ಪಾಷಾ ಡ್ರಾಮಾ ಎಂದು ಗೊತ್ತಾಗಿದೆ. ಎಫ್‌ಐಆರ್ ದಾಖಲಿಸುವ ವೇಳೆ ಆಡಂ ಪಾಷಾ ರಾಂಗ್ ನಂಬರ್ ನೀಡಿದ್ದಾರೆ. ಸಿಸಿಟಿವಿ ಪರಿಶೀಲನೆ ವೇಳೆ ಆಡಂ ಹೇಳಿದಂತೆ ಹಲ್ಲೆಯಾಗಿರುವ ಸನ್ನಿವೇಶ ಕಂಡಿಲ್ಲ.

ಆಡಂ ಖುದ್ದು ಬಟ್ಟೆಯನ್ನು ಹರಿದುಕೊಂಡು ಬಂದು ಠಾಣೆ ಮೆಟ್ಟಿಲೇರಿದ್ದಾರೆ. ಇದೀಗ ಹಿರಿಯ ಅಧಿಕಾರಿಗಳು ಆಡಂ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!