ಪ್ರಧಾನಿ ಮೋದಿ ವಿರುದ್ಧದ ಸಾಕ್ಷ್ಯಚಿತ್ರ: ಬಿಬಿಸಿ ಪ್ರಚಾರಕ್ಕೆಂದು ಮಾಡಿಕೊಂಡಿರುವ ವಿಡಿಯೊ ಎಂದ ಬ್ರಿಟಿಷ್ ಸಂಸದ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ವಿರುದ್ಧ ಬಿಬಿಸಿ(BBC) ತಯಾರಿಸಿರುವ ಸಾಕ್ಷ್ಯಚಿತ್ರದ ಕುರಿತಾಗಿ ಬ್ರಿಟಿಷ್ ಸಂಸತ್ತಿನ ಸಂಸದರಾದ ಬಾಬ್ ಬ್ಲ್ಯಾಕ್‌ಮನ್ (Bob Blackman) ಅವರು ಅಸಮಾಧಾನ ಹೊರಹಾಕಿದ್ದಾರೆ.

ಭಾರತದ ಮಾಧ್ಯಮಯೊಂದಕ್ಕೆ ಸಂದರ್ಶನ ನೀಡಿದ ವೇಳೆ ಮಾತನಾಡಿರುವ ಬಾಬ್ ಅವರು ಇದು ನಿಜಕ್ಕೂ ನಾಚಿಕೆಗೇಡಿನ ಪತ್ರಿಕೋದ್ಯಮದ ಅವಮಾನಕರ ತುಣುಕು. ಬಿಬಿಸಿ ಇಂತಹ ವಿಡಿಯೊವನ್ನು ಎಂದಿಗೂ ಪ್ರಸಾರ ಮಾಡಬಾರದು. 2002ರ ಗಲಭೆಯಲ್ಲಿ ಮೋದಿ ಅವರಿಗೆ ಸಂಬಂಧವಿದೆ ಎನ್ನುವುದಕ್ಕೆ ಯಾವುದೇ ಸಾಕ್ಷಿಯಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಈ ವಿಡಿಯೊದಲ್ಲಿ ಅಂತಹ ಪ್ರಮುಖ ಅಂಶಗಳನ್ನೇ ತೋರಿಸಿಲ್ಲ ಎಂದು ಹೇಳಿದ್ದಾರೆ .ಇದು ಬಿಬಿಸಿ ಪ್ರಚಾರಕ್ಕೆಂದು ಮಾಡಿಕೊಂಡಿರುವ ವಿಡಿಯೊ ಎಂದು ಅವರು ದೂರಿದ್ದಾರೆ.

ಬಿಬಿಸಿ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆಯಿಂದ ದಾಳಿ ಬಗ್ಗೆಯೂ ಮಾತನಾಡಿರುವ ಅವರು, ಇದು ಇಂದು, ನಿನ್ನೆಯ ಸಮಸ್ಯೆಯಲ್ಲ. ಭಾರತದಲ್ಲಿನ ಆದಾಯ ತೆರಿಗೆ ಅಧಿಕಾರಿಗಳು ಮತ್ತು ಬಿಬಿಸಿ ನಡುವೆ ಚರ್ಚೆಗಳು ಹಲವು ಕಾಲದಿಂದ ನಡೆಯುತ್ತಿದೆ. ಪ್ರಸಾರಕರು ಸಂಬಂಧಿತ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕುಎಂದು ಹೇಳಿದ್ದಾರೆ.

ಬ್ರಿಟಿಷ್ ಸರ್ಕಾರವು ಭಾರತವನ್ನು ಬಲವಾದ ಸ್ನೇಹಿತ. ಉಭಯ ದೇಶಗಳು ವ್ಯಾಪಾರ ಒಪ್ಪಂದಗಳ ಮಾತುಕತೆ ನಡೆಸುತ್ತಿವೆ. ನಾವು ಒಂದು ವರ್ಷದ ಹಿಂದೆ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ, ಈಗ ಭದ್ರತೆ, ರಕ್ಷಣೆ ಮತ್ತು ಇತರ ವಿಷಯಗಳ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಈ ಪ್ರಕ್ರಿಯೆಯನ್ನು ಅಡ್ಡಿಪಡಿಸುವ ಯಾವುದೇ ವಿಚಾರವಾದರೂ ಅದು ಅತ್ಯಂತ ವಿಷಾದನೀಯ. ಬಿಬಿಸಿ ಸಾಕ್ಷ್ಯಚಿತ್ರವು ಕೂಡ ಅತ್ಯಂತ ವಿಷಾದನೀಯ. ಇದು ಇಂಗ್ಲೆಂಡ್-ಭಾರತದ ಸಂಬಂಧವನ್ನು ಅಡ್ಡಿಪಡಿಸಲೆಂದೇ ಮಾಡಿದಂತೆ ಕಾಣುತ್ತದೆ. ಇದು ದೊಡ್ಡ ಅವಮಾನ ಎಂದು ನಾನು ಭಾವಿಸುತ್ತೇನ” ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರ ಕುರಿತಾಗಿಯೂ ಮಾತನಾಡಿರುವ ಅವರು, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತ ಸರ್ಕಾರವು ದೇಶದ ಆರ್ಥಿಕತೆಯನ್ನು ಪರಿವರ್ತಿಸುವಲ್ಲಿ ಗಮನಾರ್ಹ ಕೆಲಸ ಮಾಡಿದೆ. ಈಗ ಭಾರತ ವಿಶ್ವದ ಪ್ರಮುಖ ಆರ್ಥಿಕತೆಯ ಹಾದಿಯಲ್ಲಿದೆ. ಹಾಗಿರುವಾಗ ಈ ರೀತಿಯ ಸುಳ್ಳು ತುಂಬಿರುವ ಸಾಕ್ಷ್ಯಚಿತ್ರ ಮಾಡಿರುವುದು ದೊಡ್ಡ ತಪ್ಪು. ಸಾಕ್ಷ್ಯಚಿತ್ರವನ್ನು ಬಿಬಿಸಿ ಎಂದಿಗೂ ಪ್ರಸಾರ ಮಾಡಬಾರದು. ಏಕೆಂದರೆ ಬಿಬಿಸಿ ವಿಶ್ವಾದ್ಯಂತ ಖ್ಯಾತಿಯನ್ನು ಹೊಂದಿದೆ. ಒಂದು ವೇಳೆ ಈ ವಾಹಿನಿಯೇ ಇದನ್ನು ಬಿತ್ತರಿಸಿದರೆ ಜನರು ಅದನ್ನು ನಿಜ ಎಂದು ಭಾವಿಸಿಬಿಡುತ್ತಾರೆ. ಇದು ಸತ್ಯಕ್ಕೆ ದೂರವಾಗಿದೆ ಎಂದೂ ಸಂಸದರು ಹೇಳಿದ್ದಾರೆ.

ನಾನು ಇಲ್ಲಿ ಸ್ಪಷ್ಟವಾಗಿ ಹೇಳುತ್ತೇನೆ. ಬಿಬಿಸಿ ಬ್ರಿಟಿಷ್ ಸರ್ಕಾರದ ಅಂಗವಲ್ಲ. ವಾಸ್ತವವಾಗಿ, ಬಿಬಿಸಿ ಆಗಾಗ್ಗೆ ಬ್ರಿಟಿಷ್ ಸರ್ಕಾರವನ್ನೂ ಟೀಕಿಸುತ್ತದೆ. ಮಾಧ್ಯಮಗಳು ಪ್ರಶ್ನೆಗಳನ್ನು ಕೇಳಬಹುದು. ಆದರೆ ಅದಕ್ಕೆ ವಿರುದ್ಧವಾದ ಪುರಾವೆಗಳು ಇದ್ದಾಗ ಮತ್ತು ಅದು ಸ್ಪಷ್ಟವಾಗಿಲ್ಲದಿದ್ದಾಗ, ಸುಳ್ಳು ಸುದ್ದಿಗಳನ್ನು ಬಿತ್ತರಿಸಬಾರದು ಎಂದು ಬಾಬ್ ಬ್ಲ್ಯಾಕ್‌ಮನ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!