ಯಾರನ್ನೂ ಹಗುರವಾಗಿ ಪರಿಗಣಿಸೋದಿಲ್ಲ, ಶ್ರದ್ಧೆಯಿಂದ ಸ್ಪರ್ಧೆ ಮಾಡ್ತೇನೆ: ಜಗದೀಶ್‌ ಶೆಟ್ಟರ್‌

ಹೊಸದಿಗಂತ ವರದಿ ಹುಬ್ಬಳ್ಳಿ:

ಹುಬ್ಬಳ್ಳಿ ಜನ್ಮ ಭೂಮಿಯಾಗಿದೆ. ಬೆಳಗಾವಿ ನನ್ನ ಕರ್ಮಭೂಮಿಯಾಗಿ ಸ್ವೀಕರಿಸ್ತುತೇನೆ. ಅಲ್ಲಿರುವ ಎಲ್ಲ ನಾಯಕ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಯ ಎದುರಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ತಿಳಿಸಿದರು.

ಸೋಮವಾರ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಎಲ್ಲ ನಾಯಕ ಜೊತೆ ಮಾತನಾಡಿದ್ದು, ಒಟ್ಟಾಗಿ ಚುನಾವಣೆ ಮಾಡೋಣ ಎಂದಿದ್ದಾರೆ. ಬುಧವಾರ(ಮಾ.೨೭)ದಿಂದ ಬೆಳಗಾವಿಯಲ್ಲಿ ಪ್ರಚಾರ ಆರಂಭಿಸುತ್ತೇನೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಯುವಕನೆಂಬ ಕಾರಣ ಹಗುರವಾಗಿ ಪರಿಗಣಿಸಲ್ಲ. ಅಲ್ಲಿ ಜಾತಿಯು ಕೆಲಸ ಮಾಡಲ್ಲ. ಈ ಚುನಾವಣೆ ಬಹಳ ಗಂಭೀರವಾಗಿ ತೆಗೆದುಕೊಂಡಿದ್ದು, ಎಲ್ಲ ವರ್ಗದ ಜನರ ವಿಶ್ವಾಸಕ್ಕೆ ತೆಗೆದುಕೊಂಡು ನಾನು ಗೆಲ್ಲತ್ತೇನೆ ಎಂದು ತಿಳಿಸಿದರು.

ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು ಎಂಬುವುದು ನನ್ನ ಇಚ್ಛೆಯಾಗಿದೆ. ನನಗೆ ಟಿಕೆಟ್ ದೊರೆಕಿದ್ದಕ್ಕಾಗಿ ಸಂಸದೆ ಮಂಗಳಾ ಅಂಗಡಿ ಕುಟುಂಬಸ್ಥರು ತುಂಬಾ ಸಂತೋಷ ವ್ಯಕ್ತಪಡಿಸಿದ್ದಾರೆ. ಅವರು ನಮ್ಮ ಪರವಾಗಿ ಪ್ರಚಾರ ಮಾಡಲಿದ್ದಾರೆ. ಇನ್ನೂ ರಮೇಶ ಜಾರಕಿಹೊಳಿ ನಿರಂತರ ಸಂಪರ್ಕದಲ್ಲಿದ್ದು ನಮಗೆ ಬೆಂಬಲ ನೀಡುತ್ತಾರೆ ಎಂದು ಹೇಳಿದರು.

ಗಾಲಿ ಜನಾರ್ಧನ ರೆಡ್ಡಿ ಬಿಜೆಪಿ ಸೇರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜನಾರ್ಧನ ರೆಡ್ಡಿ ಅವರು ಪಕ್ಷದ ಅಸ್ತಿತ್ವ ಇಲ್ಲದ ಸಂದಂರ್ಭದಲ್ಲಿ ಸಂಘಟನೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಬಿಜೆಪಿ ಸಲುವಾಗಿ ಕೆಲಸ ಮಾಡಿದ್ದಾರೆ. ಜನಾರ್ಧನ ರೆಡ್ಡಿ ಅಷ್ಟೇ ಅಲ್ಲದೇ ಸಾಕಷ್ಟು ಜನ ಬಿಜೆಪಿ ಬರಲಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!