ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿಯವರ ಪದವಿ ಕುರಿತು ಕೇಳಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಗುಜರಾತ್ ಹೈಕೋರ್ಟ್ 25,000 ರೂಪಾಯಿ ದಂಡ ವಿಧಿಸಿದೆ. ಜೊತೆಗೆ ಪಿಎಂ ಪದವಿಯನ್ನ ಸಾರ್ವಜನಿಕಗೊಳಿಸುವ ಅಗತ್ಯವಿಲ್ಲ ಎಂದು ಕೋರ್ಟ್ ಪಿಎಂಒಗೆ ತಿಳಿಸಿದೆ.
ದಂಡ ವಿಧಿಸಿದ್ದಕ್ಕೆ ಸಿಎಂ ಕೇಜ್ರಿವಾಲ್ ಅಸಮಾಧಾನಗೊಂಡಿದ್ದು, ದೇಶದ ಪ್ರಜೆಗೆ ಪ್ರಧಾನಿ ಪದವಿಯ ಬಗ್ಗೆಯೂ ತಿಳಿಯಲು ಸಾಧ್ಯವಿಲ್ಲವೇ ಎಂಬ ಪ್ರಶ್ನಿಸಿದ್ದಾರೆ.
ತಮ್ಮ ಪ್ರಧಾನಿ ಎಷ್ಟು ಓದಿದ್ದಾರೆ ಎಂದು ತಿಳಿದುಕೊಳ್ಳುವ ಹಕ್ಕು ದೇಶಕ್ಕೆ ಇಲ್ಲವೇ? ಅವರ ಪದವಿಯನ್ನು ನೋಡಲು ಬೇಡಿಕೆಯಿರುವವರಿಗೆ ದಂಡ ವಿಧಿಸಲಾಗುತ್ತದೆಯೇ? ಇದು ಏನಾಗುತ್ತಿದೆ.? ಅನಕ್ಷರಸ್ಥ ಅಥವಾ ಕಡಿಮೆ ವಿದ್ಯಾವಂತ ಪ್ರಧಾನಿ ದೇಶಕ್ಕೆ ತುಂಬಾ ಅಪಾಯಕಾರಿ ಎಂದು ಕಿಡಿಕಾರಿದ್ದಾರೆ.