ಮನೀಶ್ ಸಿಸೋಡಿಯಾಗೆ ಮತ್ತೆ ಹಿನ್ನಡೆ: ಜಾಮೀನು ಅರ್ಜಿ ವಜಾಗೊಳಿಸಿದ ದೆಹಲಿ ನ್ಯಾಯಾಲಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮನೀಶ್ ಸಿಸೋಡಿಯಾ ಅವರ (Manish Sisodia) ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ವಜಾಗೊಳಿಸಿದೆ.
ವಿಚಾರಣೆಗೆ ಸಂಬಂಧಿಸಿದಂತೆ ತನಿಖೆಯ ಕೊನೆಯ ದಿನದಂದು ನ್ಯಾಯಾಲಯದ ನಿರ್ದೇಶನದಂತೆ ಸಿಬಿಐ ಪ್ರತಿನಿಧಿಸುವ ವಕೀಲರು ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಕ್ಷಿಪ್ತ ಲಿಖಿತ ಸಲ್ಲಿಕೆಗಳು ಮತ್ತು ವಿಚಾರಣೆ ವರದಿಗಳನ್ನು ಸಲ್ಲಿಸಿದ ನಂತರ ನ್ಯಾಯಲಯದ ವಿಶೇಷ ನ್ಯಾಯಾಧೀಶ ಎಂ.ಕೆ.ನಾಗ್ಪಾಲ್ ಕಳೆದ ವಾರ ಜಾಮೀನಿನ ಮೇಲಿನ ಆದೇಶವನ್ನು ಕಾಯ್ದಿರಿಸಿದ್ದರು.

ಜೊತೆಗೆ ಸಿಸೋಡಿಯಾ ಅವರು ತಮ್ಮ ಜಾಮೀನು ಅರ್ಜಿಯಲ್ಲಿ, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ತನಿಖೆಗಳನ್ನು ಈಗಾಗಲೇ ಮಾಡಿರುವುದರಿಂದ ಅವರನ್ನು ಕಸ್ಟಡಿಯಲ್ಲಿಡಲು ಯಾವುದೇ ಕಾರಣವಿಲ್ಲ ಹಾಗೂ ಅವರ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಪುರಾವೆ ಪತ್ತೆಯಾಗದ ಕಾರಣ ಅವರನ್ನು ಈ ಪ್ರಕರಣದಿಂದ ಮುಕ್ತಗೊಳಿಸಬೇಕು ಎಂದು ಈ ಹಿಂದೆ ಹೇಳಿದ್ದರು.

ಈ ಬಗ್ಗೆ ಪ್ರಶ್ನಿಸಿದ ಸಿಬಿಐ ಅವರಿಗೆ ಜಾಮೀನು ನೀಡಿದರೆ ಇದು ನಮ್ಮ ತನಿಖೆಗೆ ತೊಂದರೆಯಾಗುತ್ತದೆ. ಜೊತೆಗೆ ಈ ಪ್ರಕರಣಕ್ಕೆ ಬೇಕಾಗಿರುವ ಇನ್ನಷ್ಟು ಮಾಹಿತಿ ಸಿಗದೇ ಇರಬಹುದು. ಇದರಲ್ಲಿ ಪ್ರಭಾವಿಗಳ ಹಸ್ತಕ್ಷೇಪವು ಆಗಬಹುದು ಎಂದು ಸಿಬಿಐ ಪರ ವಕೀಲ ಡಿಪಿ ಸಿಂಗ್, ಸಿಸೋಡಿಯಾ ಅವರ ಮನವಿಯನ್ನು ವಿರೋಧಿಸಿದರು. ಸಿಸೋಡಿಯಾ ಅವರು ಫೋನ್‌ಗಳನ್ನು ಅಪ್‌ಗ್ರೇಡ್ ಮಾಡಲು ಬಯಸಿದ್ದರಿಂದ, ಈಗಾಗಲೇ ಅವರು ಅದರಲ್ಲಿರುವ ದಾಖಲೆಗಳನ್ನು ಡಿಲಿಟ್ ಮಾಡುವ ಸಾಧ್ಯತೆಗಳು ಇದೆ ಎಂದು ಹೇಳಿದರು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!