ಶಾಂತಿ ಕದಡುವ ಸಂಘಟನೆಗಳನ್ನು ಬ್ಯಾನ್‌ ಮಾಡುವ ಧಮ್‌ ಸರ್ಕಾರಕ್ಕಿದೆಯೇ? ಸಿದ್ಧರಾಮಯ್ಯ ಸವಾಲು

ಹೊಸದಿಗಂತ ವರದಿ, ಹುಬ್ಬಳ್ಳಿ
ಸಮಾಜದ ಶಾಂತಿ ಕದಡುವ ಸಂಘಟನೆಗಳನ್ನು ಸರ್ಕಾರ ಬ್ಯಾನ್ ಮಾಡಲಿ. ಇದಕ್ಕೆ ಯಾರ ವಿರೋಧವೂ ಇಲ್ಲ. ಆದರೆ ಮಗುವನ್ನೂ ಚೂಟಿ, ತೊಟ್ಟಿಲನ್ನೂ ತೂಗುವ ಕೆಲಸವನ್ನು ಸರ್ಕಾರ ಮಾಡಬಾರದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಶುಕ್ರವಾರ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಎಸ್.ಡಿಪಿಐ, ಎಐಎಂಐಎಂ, ಆರ್.ಎಸ್.ಎಸ್‌ ನಂತಹ ಕೆಲ ಸಂಘಟನೆಗಳು ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿವೆ ಎಂಬುದಾದಲ್ಲಿ ಬ್ಯಾನ್‌ ಮಾಡಲಿ. ಸರ್ಕಾರಕ್ಕೆ ಆ ಧಮ್ ಇದೆಯೇ ಎಂದು ಪ್ರಶ್ನಿಸಿದರು. ಅದನ್ನು ಬಿಟ್ಟು ಅನಗತ್ಯ ಹೇಳಿಕೆ ನೀಡುವುದನ್ನು ಬಿಡಬೇಕು ಎಂದರು.
ರಾಜ್ಯದ ಗೃಹ ಸಚಿವ ಬಹು ಬೇಜವಾಬ್ದಾರಿತನದ ವ್ಯಕ್ತಿ. ಆ ಸ್ಥಾನದಲ್ಲಿರುವವರು ಯಾವುದೇ ಹೇಳಿಕೆ ನೀಡುವ ಮೊದಲು ಜಾಗ್ರತೆ ಮತ್ತು ಜವಾಬ್ದಾರಿ ವಹಿಸಬೇಕು. ಆದರೆ ಅವರು ಬೆಳಿಗ್ಗೆ ಒಂದು ಹೇಳಿಕೆ, ಸಂಜೆಯೊಂದು ಹೇಳಿಕೆ ನೀಡುತ್ತಿದ್ದಾರೆ. ಹೊಣೆಗಾರಿಕೆ ನಿರ್ವಹಣೆ ಮಾಡಲಾಗದಿದ್ದರೆ ರಾಜೀನಾಮೆ ಕೊಟ್ಟು ತೊಲಗಬೇಕು‌. ಇಲಾಖೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಸಮಾಜದಲ್ಲಿ ಶಾಂತಿ ನೆಲೆಸಲು ಅಗತ್ಯ ಕ್ರಮಗಳನ್ನು ವಹಿಸಬೇಕು. ಆದರೆ ಅಶಾಂತಿ ಮೂಡಿಸುವ, ಗೊಂದಲು ಉಂಟು ಮಾಡುವ ಕೆಲಸ ಮಾಡಬಾರದು ಎಂದು ವಾಗ್ದಾಳಿ ನಡೆಸಿದರು.
ಆರ್. ಅಶೋಕಗೆ ಹುಬ್ಬಳ್ಳಿ ಗಲಭೆಯ ಬಗ್ಗೆ ಗೊತ್ತಿದೆಯಾ? ಅವರೇನು ಘಟನೆಯ ಪ್ರಮುಖ ಸಾಕ್ಷಿಯೇ? ಎಂದು  ಗಲಬೆ ಕುರುತ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ರಾಜ್ಯ ಸರ್ಕಾರ ಮೌಲ್ವಿಗಳ ಮಾಹಿತಿ ಸಂಗ್ರಹಿಸುತ್ತಿರುವ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಒಬ್ಬ ಮೌಲ್ವಿ ತಪ್ಪು ಮಾಡಿದರೆ ಎಲ್ಲ ಮೌಲ್ವಿಗಳನ್ನು ಅದೇ ದೃಷ್ಟಿಯಿಂದ ನೋಡುವುದು ಸರಿಯಲ್ಲ. ಹುಬ್ಬಳ್ಳಿ ಗಲಭೆ ಗೆ ಪ್ರಮುಖ ವ್ಯಕ್ತಿ ಎಂದು ಹೇಳಲಾಗುತ್ತಿರುವ ಮೌಲ್ವಿಯೇ ಘಟನೆಯ ಸೂತ್ರದಾರ ಎಂಬುದಕ್ಕೆ ಖಾತರಿಯಿಲ್ಲ. ಸ್ಥಳೀಯರ ಪ್ರಕಾರ ಆ ವ್ಯಕ್ತಿ ಮೌಲ್ವಿ ಅಲ್ಲ. ಅನಗತ್ಯ ಹೇಳಿಕೆಗಳ ಮೂಲಕ ಪ್ರಕರಣವನ್ನು ಕಗ್ಗಂಟಾಗಿಸಲಾಗುತ್ತಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!