ಫಟಾಫಟ್‌ ಅಂತ ಗಾರ್ಲಿಕ್‌ ರೈಸ್‌ ಮಾಡೋಣ ಬನ್ನಿ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನೀವು ಎಂದಾದ್ರೂ ಗಾರ್ಲಿಕ್‌ ರೈಸ್‌ ಮಾಡಿದ್ದೀರಾ..? ಮಾಡಿಲ್ಲ ಅಂದ್ರೆ ಒಮ್ಮೆ ಟ್ರೈ ಮಾಡಿ ನೋಡಿ ತುಂಬಾ ರುಚಿಯಾಗಿರುತ್ತದೆ.

ಬೇಕಾಗುವ ಸಾಮಗ್ರಿ
1- ಕಪ್ ಅಕ್ಕಿ
30-35 ಎಸಳು ಬೆಳ್ಳುಳ್ಳಿ
2- ಈರುಳ್ಳಿ
2- ಹಸಿ ಮೆಣಸು
2- ಒಣ ಮೆಣಸು
2- ಚಮಚ ತುಪ್ಪ / ಎಣ್ಣೆ 1/ 4 ಚಮಚ
1- ಚಮಚ ಸಾಸಿವೆ
2- ಚಮಚ ಉದ್ದಿನ ಬೇಳೆ
2- ಕಡಲೆ ಬೇಳೆ
ಕರಿಬೇವು ಕೊತ್ತಂಬರಿ ಸೊಪ್ಪು
ರುಚಿಕೆ ತಕ್ಕ ಉಪ್ಪು
ನಿಂಬೆ ಹಣ್ಣು

ಮಾಡುವ ವಿಧಾನ
ಅನ್ನವನ್ನು ಮೊದಲೇ ತಯಾರು ಮಾಡಿಟ್ಟುಕೊಳ್ಳಬೇಕು. ಬಾಣಲೆಗೆ ಎಣ್ಣೆ ಅಥವಾ ತುಪ್ಪ ಹಾಕಿ ಬಿಸಿ ಮಾಡಿ ಅದರಲ್ಲಿ ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ, ಪಕ್ಕಕ್ಕಿಡಿ. ಈಗ ಅದೇ ಬಾಣಲೆಯಲ್ಲಿರುವ ಎಣ್ಣೆಗೆ ಸಾಸಿವೆ ಹಾಕಿ, ಸಾಸಿವೆ ಸಿಡಿದ ಬಳಿಕ ಕರಿಬೇವು ಹಾಕಿ. ಬಳಿಕ ತೊಗರಿ ಬೇಳೆ ಹಾಗೂ ಕಡಲೆ ಬೇಳೆ ಸೇರಿಸಿ. ಒಣ ಮೆಣಸಿನಕಾಯಿಯನ್ನು ಮುರಿದು ಹಾಕಿ. ಈರುಳ್ಳಿ, ಹಸಿ ಮೆಣಸು ಹಾಕಿ , ಈರುಳ್ಳಿ ಸ್ವಲ್ಪ ಕಂದು ಬಣ್ಣಕ್ಕೆ ತಿರುಗುವಾಗ, ಫ್ರೈ ಮಾಡಿದ ಬೆಳ್ಳುಳ್ಳಿ ಸೇರಿಸಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಗ್ಯಾಸ್ ಸ್ಟೌವ್ ಆಫ್‌ ಮಾಡಿ. ಅದಕ್ಕೆ ಮಾಡಿಟ್ಟಿದ್ದ ಅನ್ನ ಹಾಕಿ ಸ್ವಲ್ಪ ನಿಂಬೆ ರಸ ಹಿಂಡಿ ಮತ್ತೊಮ್ಮೆ ಮಿಕ್ಸ್ ಮಾಡಿ, ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಗಾರ್ನಿಷ್‌ ಮಾಡಿದ್ರೆ ತಿನ್ನವುದಕ್ಕೆ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!