ಈ ಸಂದರ್ಭ ನಿಮ್ಮಲ್ಲಿ ಎಷ್ಟೋ ಜನಕ್ಕೆ ಎದುರಾಗಿರಬಹುದು. ನೀವು ಯಾವುದೇ ಸಾರ್ವಜನಿಕ ಸ್ಥಳಕ್ಕೆ ಹೋದ ನಂತರ ಆ ಜಾಗದಲ್ಲಿ ಜನ ಜಾಸ್ತಿ ಎನಿಸುತ್ತಾ ಇದೆಯಾ? ಇದಕ್ಕೆಲ್ಲಾ ನೀವೇ ಕಾರಣ. ಹೇಗೆ ತಿಳಿದುಕೊಳ್ಳೋಣ ಬನ್ನಿ..

ಹೊಟೇಲ್ ಅಥವಾ ಶಾಪಿಂಗ್ ಮಾಡೋದಕ್ಕೆ ಹೋಗಿದ್ದೀರಿ ಎಂದುಕೊಳ್ಳಿ. ಈ ವೇಳೆ ನೀವು ಹೋದಾಗ ಒಂದು ಟೇಬಲ್‌ನಷ್ಟು ಜನ ಮಾತ್ರ ಇದ್ದಾರೆ ಎಂದುಕೊಳ್ಳಿ. ನೀವು ಹೋಗಿ ಸ್ವಲ್ಪ ಹೊತ್ತಿಗೆ ಒಬ್ಬರೊಬ್ಬರಂತೆಯೇ ಜನರು ಆಗಮಿಸಿ ಅಲ್ಲಿರುವ ಎಲ್ಲ ಚೇರ್‌ಗಳು ಫಿಲ್ ಆಗಿಬಿಡುತ್ತವೆ. ಈ ಅನುಭವ ನಿಮಗೆ ಆಗಿದೆಯಾ? ಇದು ಪಾಸಿಟಿವ್ ಜನರ ಲಕ್ಷಣವಂತೆ! ಹೌದು, ನಿಮ್ಮಲ್ಲಿ ಪಾಸಿಟಿವ್ ಎನರ್ಜಿ ಇದ್ದರೆ ನೀವು ಇತರರನ್ನು ಆಕರ್ಷಿಸುತ್ತೀರಿ. ನಿಮ್ಮ ಎನರ್ಜಿಯಿಂದಾಗಿ ಹೆಚ್ಚೆಚ್ಚು ಜನರು ಆಗಮಿಸುತ್ತಾ ಹೋಗುತ್ತಾರೆ. ಈ ರೀತಿ ವ್ಯಕ್ತಿಗಳ ಮನಸ್ಸು ಶುದ್ಧವಾಗಿರುತ್ತದೆ ಎಂದು ಹೇಳಲಾಗುತ್ತದೆ.

ಇನ್ಯಾವ ಕಾರಣಗಳಿವೆ?
ನೀವು ಪೀಕ್ ಅವರ್‌ನಲ್ಲಿ ಜಾಗಗಳನ್ನು ವಿಸಿಟ್ ಮಾಡಿದರೆ ಜನ ಬಂದೇ ಬರುತ್ತಾರೆ. ನಾನು ಹೋದರೆ ಜನ ಜಾಸ್ತಿ ಬರುತ್ತಾರೆ ಎನ್ನುವ ಅಂಶ ನಿಮ್ಮ ತಲೆಯಲ್ಲಿ ಸ್ಟೋರ್ ಆಗಿರುವ ಕಾರಣ ಇದು ಸತ್ಯ ಎನಿಸುತ್ತದೆ. ನಾನು ಬಂದಮೇಲೆ ಜನ ಜಾಸ್ತಿ ಬಂದಿದ್ದಾರೆ ಎನಿಸುತ್ತದೆ.
ಒಂದು ಬಾರಿ ನೀವು ಈ ಪ್ಯಾಟರ್ನ್‌ನ್ನು ನೋಟಿಸ್ ಮಾಡಿದರೆ ಯಾವ ಜಾಗಕ್ಕೆ ಹೋದರೂ ಅದೇ ಸತ್ಯ ಎನಿಸುತ್ತದೆ. ಉದಾಹರಣೆಗೆ ನಿಮಗೆ ಮಧ್ಯರಾತ್ರಿ ಎಚ್ಚರ ಆಯ್ತು ಎಂದುಕೊಳ್ಳಿ. ಆಗ ನೀವು ಸಮಯವನ್ನು ನೋಡಬಾರದು. ನಿಮ್ಮ ಪಾಡಿಗೆ ಮಲಗಲು ಯತ್ನಿಸಬೇಕು. ಒಂದು ಬಾರಿ ನೀವು ಸಮಯ ನೋಡಿದರೆ ನಿಮ್ಮ ಮೆದುಳು ಅದನ್ನು ಕಾಪಿ ಮಾಡಿಕೊಳ್ಳುತ್ತದೆ. ನಿತ್ಯವೂ ಅದೇ ಸಮಯಕ್ಕೆ ತಾನಾಗಿಯೇ ಎಚ್ಚರವಾಗುತ್ತದೆ. ಅದೇ ರೀತಿ ನೀವು ಆಯ್ಕೆ ಮಾಡುವ ಜಾಗ, ಸಮಯ, ಏರಿಯಾ ಎಲ್ಲವೂ ಹೆಚ್ಚು ಜನರು ಇರುವಂಥದ್ದೂ ಆಗಿರಬಹುದು.



