ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈ ಜುಮ್ಮೆನಿಸುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ನಾಯಿಯೊಂದು ಮನುಷ್ಯನ ತಲೆಯನ್ನು ಬಾಯಿಯಿಂದ ಕಚ್ಚಿ ರಸ್ತೆಯಲ್ಲಿ ಓಡುತ್ತಿದ್ದು, ಮೆಕ್ಸಿಕೋದ ಝಕಾಟೆಕಾಸ್‌ನಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ಅಧಿಕಾರಿಗಳ ವಿವರಗಳ ಪ್ರಕಾರ, ಸತತ ಪ್ರಯತ್ನದಿಂದಾಗಿ ನಾಯಿಯ ಬಾಯಿಯಿಂದ ವ್ಯಕ್ತಿಯ ತಲೆಯನ್ನು ಬಿಡಿಸುವಲ್ಲಿ ಪೊಲೀಸರು ಯಶಸ್ವಿಯಾದರು.
ಮಾಂಟೆ ಎಸ್ಕೊಬೆಡೊ ಪಟ್ಟಣದ ಸ್ವಯಂಚಾಲಿತ ಟೆಲ್ಲರ್ ಬೂತ್‌ನಲ್ಲಿ ತಲೆ ಮತ್ತು ದೇಹದ ಇತರ ಭಾಗಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ವ್ಯಕ್ತಿಯನ್ನು ಇನ್ನೂ ಗುರುತಿಸಲಾಗಿಲ್ಲ. ದೇಹದ ಉಳಿದ ಭಾಗಗಳೂ ಪತ್ತೆಯಾಗಿಲ್ಲ. ವರದಿಗಳ ಪ್ರಕಾರ, ಮೃತರ ವಯಸ್ಸನ್ನು ಖಚಿತಪಡಿಸಿಕೊಳ್ಳಲು ತಲೆಯನ್ನು ವಿಧಿವಿಜ್ಞಾನ ತಂಡಕ್ಕೆ ಹಸ್ತಾಂತರಿಸಲಾಗಿದೆ. ಆದರೆ ಘಟನೆ ಸ್ಥಳದಲ್ಲಿ ಎರಡು ನೋಟುಗಳೂ ಪತ್ತೆಯಾಗಿವೆ. ಮೃತರು ಕ್ರಿಮಿನಲ್ ಪ್ರವೃತ್ತಿಯನ್ನು ಹೊಂದಿರಬಹುದು, ಯಾವುದೋ ಗಲಾಟೆಯಲ್ಲಿ ಅಪರಿಚಿತ ವ್ಯಕ್ತಿಗಳು ಅವನನ್ನು ಕೊಂದು ಇಲ್ಲಿ ಎಸೆದಿರಬಹುದೆಂದು ಪೊಲೀಸರು ಶಂಕಿಸಿದರು.
Dog walking with Human Head in its Snout 😳⚠️ Monte Escobedo, Zacatecas, Mexico 📍 pic.twitter.com/566FjXCxmG
— Ibar Yahawadah 🔥💯 (@IbarYahawadah) November 1, 2022