ಹೊಸದಿಗಂತ ಡಿಜಿಟಲ್ ಡೆಸ್ಕ್
ಜಾಗತಿಕವಾಗಿ ಮಂಕಿಫಾಕ್ಸ್ ಸೋಕು ವೇಗವಾಗಿ ಪ್ರರಣವಾಗುತ್ತಿದ್ದು, ಎಲ್ಲಡೆ ಭೀತಿ ಹುಟ್ಟುಹಾಕಿದೆ. ಈ ನಡುವೆ ಪ್ರಾನ್ಸ್ ದೇಶದ ಪ್ಯಾರೀಸ್‌ನಲ್ಲಿ ನಾಯಿಯೊಂದರಲ್ಲಿ ಮಂಕಿಪಾಕ್ಸ್ ವೈರಸ್ ಸೋಂಕು ಪತ್ತೆಯಾಗಿದೆ. ಈ ಮೂಲಕ ಪ್ರಾಣಿಗಳಲ್ಲಿಯೂ ಇದೇ ಮೊದಲ ಬಾರಿಗೆ ವೈರಸ್ ತಗುಲಿರುವುದನ್ನು ಫ್ರೆಂಚ್ ಸಂಶೋಧಕರು ದೃಢಪಡಿಸಿದ್ದಾರೆ. ಮಾನವರಿಂದಲೇ ನಾಯಿಗೂ ಸೋಂಕು ಹರಡಿರುವುದಾಗಿ ಅಭಿಪ್ರಾಯಕ್ಕೆ ಬರಲಾಗಿದೆ.
ನಾಯಿಯ ಮಾಲೀಕ ಸಲಿಂಗಕಾಮಿ ಎನ್ನಲಾಗಿದ್ದು, ಆತನಿಗೆ 12 ದಿನಗಳ ಹಿಂದೆ ಮಂಕಿಪಾಕ್ಸ್ ಲಕ್ಷಣಗಳು ಕಂಡುಬಂದಿದ್ದವು. ಆ ಬಳಿಕ ಆತನ ಸಾಕು ನಾಯಿಯಲ್ಲೂ ರೋಗ ಪತ್ತೆಯಾಗಿದೆ. ನಾಯಿಗೆ ಮೊದಲು ಚರ್ಮದ ಹುಣ್ಣು ಕಾಣಿಸಿಕೊಂಡಿದ್ದು, ಹೊಟ್ಟೆಯ ಭಾಗದಲ್ಲಿ ಬಿಳಿ ಕೀವು, ಮುಖ, ಕಿವಿ ಮತ್ತು ಕಾಲುಗಳ ಮೇಲೆ ದದ್ದು ಕಾಣಿಸಿಕೊಂಡಿದೆ. ಈ ಮೂಲಕ ಪ್ರಾಣಿಗಳಿಗೂ ಮಂಕಿಫಾಕ್ಸ್ ಹರಡುತ್ತಿರುವುದು ಧೃಢವಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ