ಸಾಲು ಸಾಲು ರಜೆ… ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ ಮೈಸೂರು

ಹೊಸದಿಗಂತ ವರದಿ, ಮೈಸೂರು:
ಸಾಲು ರಜೆಯ ಹಿನ್ನಲೆಯಲ್ಲಿ ಅರಮನೆ ನಗರಿ ಮೈಸೂರು ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಮೈಸೂರಿನ
ಗೆಸ್ಟ್ ಹೌಸ್ ..ಹೋಟಲುಗಳಲ್ಲಿ ಹಾಗು ಕ್ಲಬ್ ಗಳಲ್ಲಿ ಶೇ 100% ರಷ್ಟು ರೂಮುಗಳು ಹೌಸ್ ಫುಲ್ ಆಗಿವೆ.
ಈ ವಾರಾಂತ್ಯದಲ್ಲಿ ಶನಿವಾರ, ಭಾನುವಾರ ಹಾಗೂ 75 ನೇ ಸ್ವಾತಂತ್ರ್ಯೋತ್ಸದ ಪ್ರಯುಕ್ತ ಸೋಮವಾರ ರಜೆ ಇರುವುದರಿಂದ ಮೈಸೂರಿಗೆ ಹೊರ ರಾಜ್ಯಗಳು ಮತ್ತು ರಾಜ್ಯದ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಪ್ರವಾಸಿಗರು ಆಗಮಿಸಿದ್ದಾರೆ. ಈ ಈ ಮೂರೂ ದಿನ ಪ್ರವಾಸಿಗರಿಂದ ಮೈಸೂರು ನಗರದಲ್ಲಿನ ಎಲ್ಲಾ ಹೋಟೆಲ್‌ ಗಳು ಶೇ100 ರಷ್ಟು ಭರ್ತಿಯಾಗಿವೆ.
ನಗರ ಹೊರವಲಯದ ರಿಂಗ್ ರಸ್ತೆಯ ಆಜು ಬಾಜುಗಳಲ್ಲಿ ರುವ ಮತ್ತು ವಿವಿಧ ಬಡಾವಣೆಗಳಲ್ಲಿರುವ ಹೋಟಲುಗಳು ಶೇ.95% ರಷ್ಟು ರೂಮುಗಳು ಭರ್ತಿಯಾಗಿವೆ. ಮೈಸೂರು ನಗರಾದ್ಯಂತ 10 ಸಾವಿರಕ್ಕಿಂತ ಹೆಚ್ಚು ರೂಮುಗಳು ಇವೆ. ಈ ಸಲ ಸಹ ಎಲ್ಲಾ ಕಡೆ ರೂಮುಗಳು ಭರ್ತಿಯಾಗಿವೆ ಎಂದು ಮೈಸೂರು ಹೋಟಲು ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!