ಕುಕ್ಕೆ ಶ್ರೀ ಕ್ಷೇತ್ರಕ್ಕೆ ಡಾಲಿ ಧನಂಜಯ್: ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ ಅಭಿಮಾನಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಚಿತ್ರ ನಟ ಡಾಲಿ ಧನಂಜಯ್ ಭಾನುವಾರ ಕುಟುಂಬ ಸಮೇತರಾಗಿ ಭೇಟಿ ನೀಡಿದರು.
ಶ್ರೀ ದೇವರಿಗೆ ಮಹಾಪೂಜೆ ಸೇವೆ ಸಮರ್ಪಿಸಿದ ಅವರಿಗೆ ದೇವಳದ ಅರ್ಚಕ ರಾಜೇಶ್ ನಡ್ಯಂತಿಲ್ಲಾಯ ಶಾಲು ಹೊದಿಸಿ ಮಹಾಪ್ರಸಾದ ನೀಡಿ ಹರಸಿದರು. ನಟನನ್ನು ಶ್ರೀ ದೇವಳದ ಶಿಷ್ಠಾಚಾರ ವಿಭಾಗದ ಪ್ರಮೋದ್ ಕುಮಾರ್ ಎಸ್ ಸ್ವಾಗತಿಸಿದರು. ಅಭಿಮಾನಿಗಳು ಡಾಲಿ ಧನಂಜಯ್ ಅವರನ್ನು ಕಂಡು ಅವರ ಸುತ್ತು ಸುತ್ತುವರೆದು ಮಾತನಾಡಿಸಿದರಲ್ಲದೆ, ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!