ವಿಮಾನ ನಿಲ್ದಾಣದಲ್ಲಿ ಬಾಂಗ್ಲಾ ನಟಿಯ ಬಂಧನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಂಗ್ಲಾ ನಟಿ ಮಹಿಯಾ ಮಹಿ ಅವರನ್ನು ಹಜರತ್ ಶಹಜಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ನಟಿಮಹಿ ಮತ್ತು ಅವರ ಪತಿ ವಿರುದ್ಧ ಡಿಜಿಟಲ್ ಭದ್ರತಾ ಕಾಯ್ದೆ (ಡಿಎಸ್‌ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಹೀಗಾಗಿ ಬಂಧನಕ್ಕೊಳಗಾಗಿದ್ದಾರೆ.

ಪೊಲೀಸರ ಹೇಳಿಕೆಯ ಪ್ರಕಾರ, ಮಹಿಯಾ ಮಹಿ ಶುಕ್ರವಾರ ತನ್ನ ಫೇಸ್‌ಬುಕ್ ಪೇಜ್ ನ ಲೈವ್ ನಲ್ಲಿ ಪೊಲೀಸರ ವಿರುದ್ಧ ಆರೋಪ ಮಾಡಿದ್ದರು.ಶನಿವಾರ ಸೌದಿ ಅರೇಬಿಯಾದಿಂದ ಹಿಂದಿರುಗಿದ ನಂತರ ಗಾಜಿಪುರ ಮೆಟ್ರೋಪಾಲಿಟನ್ ಪೊಲೀಸರು ನಟಿಯನ್ನು ಬಂಧಿಸಿದ್ದಾರೆ.

ನಟಿ ಬಾಂಗ್ಲಾದೇಶ ಪೊಲೀಸರೊಂದಿಗೆ ಸಮಸ್ಯೆಗೆ ಸಿಲುಕಿದ್ದು ಇದೇ ಮೊದಲಲ್ಲ. ಈ ಹಿಂದೆ ಫೇಸ್‌ಬುಕ್‌ನ ಲೈವ್‌ ನಲ್ಲಿ ಮಾತನಾಡುತ್ತಾ ಹೆಸರಾಂತ ಉದ್ಯಮಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಪೊಲೀಸರನ್ನು ಮಾನಹಾನಿ ಮಾಡಿದ ಆರೋಪದ ಮೇಲೆ ಮಹಿ ಮತ್ತು ಅವರ ಪತಿ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!