Sunday, December 4, 2022

Latest Posts

ಡೊನಾಲ್ಡ್ ಟ್ರಂಪ್‌ ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ‌ ಸ್ಪರ್ಧೆ: ಸುಳಿವು ನೀಡಿದ ಆಪ್ತ ಮೂಲಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2024 ರ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಮುಂದಿನ ವಾರ ಘೋಷಣೆ ಮಾಡಲಿದ್ದಾರೆ ಎಂದು ಟ್ರಂಪ್ ರ ದೀರ್ಘಾವಧಿಯ ಸಲಹೆಗಾರ ಜೇಸನ್ ಮಿಲ್ಲರ್ ಸುಳಿವು ನೀಡಿದ್ದಾರೆ.
“ಅಧ್ಯಕ್ಷ ಟ್ರಂಪ್ ಅವರು ಅಧ್ಯಕ್ಷಗಾಧಿಗೆ ಸ್ಪರ್ಧಿಸುವುದಾಗಿ ಮಂಗಳವಾರ ಘೋಷಿಸಲಿದ್ದಾರೆ. ಮತ್ತು ಇದು ಅತ್ಯಂತ ವೃತ್ತಿಪರ, ಅತ್ಯಂತ ಗುರುತರ ಪ್ರಕಟಣೆಯಾಗಲಿದೆ” ಎಂದು ಮಿಲ್ಲರ್ ಅವರು ರೇಡಿಯೊ ಶೋ ‘ವಾರ್ ರೂಮ್’ ಚರ್ಚೆಯಲ್ಲಿ ಪಾಲ್ಗೊಂಡು ತಿಳಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಮತ್ತೊಂದು ಬಾರಿಗೆ ಸ್ಪರ್ದಿಸಲು ಟ್ರಂಪ್ ಯಾವುದೇ ಮುಲಾಜು ತೋರುವುದಿಲ್ಲ ಎಂದು ಮಿಲ್ಲರ್ ಹೇಳಿದರು.
ಟ್ರಂಪ್ ಮಂಗಳವಾರ ಫ್ಲೋರಿಡಾದ ಮಾರಾ-ಎ-ಲಾಗೊ ಎಸ್ಟೇಟ್‌ನಲ್ಲಿ ಈ ಘೋಷಣೆಯನ್ನು ಮಾಡಲಿದ್ದಾರೆ. ಮತ್ತು ಮಿಲ್ಲರ್ ಪ್ರಕಾರ, ಟ್ರಂಪ್ ಈ ಸ್ಥಳದಲ್ಲಿ ದೊಡ್ಡ ಜನಸಮೂಹ ಮತ್ತು ನೂರಾರು ಮಾಧ್ಯಮ ಸದಸ್ಯರನ್ನು ನಿರೀಕ್ಷಿಸುತ್ತಿದ್ದಾರೆ. ಮಿಲ್ಲರ್ ಅವರು 2016 ಮತ್ತು 2020 ರಲ್ಲಿ ಟ್ರಂಪ್‌ಗಾಗಿ ಕೆಲಸ ಮಾಡಿದ್ದರು. ಮತ್ತು ಅವರು ಅಧ್ಯಕ್ಷರಾದ ನಂತರ ಅವರ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!