‘ಕಸದೊಂದಿಗೆ ನಿಮ್ಮ ಪಿಂಡ ಪ್ರದಾನವನ್ನು ಇಲ್ಲೇ ಮಾಡುವ’ ಬ್ಯಾನರ್‌ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರಾಜಧಾನಿ ಬೆಂಗಳೂರಿನಲ್ಲಿ ಅದೆಷ್ಟು ಕ್ಲೀನ್‌ ಆದ ಏರಿಯಾಗಳಿವೆಯೋ ಅದರಷ್ಟೇ ಗಲೀಜಾದ ಏರಿಯಾಗಳೂ ಇವೆ. ಕಸವನ್ನು ಜನ ಎಲ್ಲಿ ಬೇಕೆಂದರಲ್ಲಿ ಎಸೆದು ಪರಿಸರವನ್ನು ಹಾಳುಮಾಡುತ್ತಿದ್ದಾರೆ. ಇದನ್ನು ನಿಲ್ಲಿಸಲು ಹಾಕಿರುವಂಥ ಬ್ಯಾನರ್‌ ಒಂದು ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

“ಕಸದೊಂದಿಗೆ ನಿಮ್ಮ ಪಿಂಡ ಪ್ರದಾನವನ್ನು ಸಹ ಇಲ್ಲೇ ಮಾಡುವ; ಕಸ ಬಿಸಾಡುವ ಆತ್ಮಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ” ಎಂದು ಬರೆದಿರುವ ಬ್ಯಾನರ್‌ ಒಂದನ್ನು ಅಳವಡಿಸಿ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ. ಈ ಬ್ಯಾನರ್‌ ಫೋಟೋ ಇದೀಗ ಸಖತ್‌ ವೈರಲ್‌ ಆಗಿದೆ.

ಇಲ್ಲಿ ಕಸ ಹಾಕಬಾರದು ಎಂಬ ಎಚ್ಚರಿಕೆಯ ಫಲಕ ಅಳವಡಿಸಿದರು ಕೂಡಾ ಕೆಲ ಜನ ಆ ಜಗದಲ್ಲಿಯೇ ಕಸವನ್ನು ಹಾಕಿ ಪರಿಸರದ ಸ್ವಚ್ಛತೆಯನ್ನು ಮತ್ತು ಸೌಂದರ್ಯವನ್ನು ಹಾಳು ಮಾಡುತ್ತಿದ್ದಾರೆ. ಕಸ ಎಸೆಯಬೇಡಿ ಎಂದು ಎಷ್ಟೇ ಹೇಳಿದರೂ ಮಾತು ಕೇಳದ ಜನರಿಗೆ ತಕ್ಕ ಪಾಠವನ್ನು ಕಲಿಸಬೇಕೆಂದು ಇಲ್ಲೊಂದು ಊರಿನ ಜನ “ಕಸದೊಂದಿಗೆ ನಿಮ್ಮ ಪಿಂಡ ಪ್ರದಾನವನ್ನು ಸಹ ಇಲ್ಲೇ ಮಾಡುವ; ಕಸ ಬಿಸಾಡುವ ಆತ್ಮಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ” ಎಂದು ಬರೆದಿರುವ ಬ್ಯಾನರ್‌ ಒಂದನ್ನು ಅಳವಡಿಸಿ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!