ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಅಂತಿಮ ದರ್ಶನಕ್ಕೆ ಶಿವಣ್ಣ ಆಗಮಿಸಿದರು. ಅವರೊಂದಿನ ಒಡನಾಟವನ್ನು ಶಿವಣ್ಣ ಸ್ಮರಿಸಿದರು.
ವೀರಪ್ಪನ್ ಅಪ್ಪನ ಅಪಹರಣ ಮಾಡಿದ ಸಂದರ್ಭದಲ್ಲಿ ಎಸ್.ಎಂ ಕೃಷ್ಣರವರು ನಮ್ಮ ಕುಟುಂಬದ ಜೊತೆ ನಿಂತಿದ್ದರು.ಎಸ್.ಎಂ ಕೃಷ್ಣ ಅವರ ಮೇಲೆ ತುಂಬಾ ಗೌರವಿದೆ. ಸಿಎಂ ಅಂದರೆ ಹೇಗಿರಬೇಕು ಅನ್ನೋದಾದ್ರೆ ಕೃಷ್ಣ ಅವರಂತಿರಬೇಕು. ಶಿಸ್ತು ಅವರು ಮಾಡುವ ಕೆಲಸದಲ್ಲಿ ಇರುತ್ತಿತ್ತು. ವೀರಪ್ಪನ್ ಅಪ್ಪನ ಅಪಹರಣ ಮಾಡಿದ ಸಂದರ್ಭದಲ್ಲಿ ಅವರು ನಮ್ಮ ಕುಟುಂಬದ ಜೊತೆ ನಿಂತಿದ್ದರು. ಅದನ್ನು ನಾವು ಯಾವತ್ತು ಮರೆಯೋದಿಲ್ಲ. ವೈಯಕ್ತಿಕವಾಗಿ ನಮಗೂ ಅವರೊಂದಿಗೆ ಒಡನಾಟವಿದೆ. ಅವರ ಇಡೀ ಕುಟುಂಬದ ಜೊತೆ ಒಳ್ಳೆಯ ಬಾಂಧವ್ಯವಿದೆ ಎಂದಿದ್ದಾರೆ.