ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಕೈಯಲ್ಲಿ ಪೆನ್ ಡ್ರೈವ್ ಹಿಡಿದು ಸರ್ಕಾರದ ವಿರುದ್ಧ ಸಮರ್ಥಿಸಿಕೊಂಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇದೀಗ ಪೆನ್ ಡ್ರೈವ್ ವಿರುದ್ಧವೇ ಡ್ರೈವ್ ಮಾಡುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಪ್ರಕರಣದ ಜೊತೆ ಎಚ್ಡಿ ದೇವೇಗೌಡರ ಕುಟುಂಬವನ್ನು ನಾಶ ಮಾಡಬೇಡಿ. ನಾವೆಲ್ಲರೂ ವಿಭಿನ್ನರು ಮತ್ತು ನಮ್ಮ ಉದ್ಯೋಗಗಳು ವಿಭಿನ್ನವಾಗಿವೆ. ನಾವು ಪಕ್ಷದ ಸಭೆಗಳಲ್ಲಿ ಮಾತ್ರ ಒಟ್ಟಿಗೆ ಬರುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.
ನಿಮಗೆ ನೆನಪಿರಬಹುದು. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪ್ರಜ್ವಲ್ ಪರ ಪ್ರಚಾರ ನಡೆಸುತ್ತಿದ್ದ ವೇಳೆ ಕುಮಾರಸ್ವಾಮಿ ‘ಪ್ರಜ್ವಲ್ ನನ್ನ ಮಗ’ ಎಂದು ಹೇಳಿದ್ದರು. ಈಗ ವರಸೆ ಬದಲಾಗಿದೆ.
ಘಟನೆಯ ತನಿಖೆಯನ್ನು ಸರ್ಕಾರ ಎಸ್ಐಟಿಗೆ ವಹಿಸಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ಆದರೆ ಮತದಾನದ ದಿನಕ್ಕೆ ಮೂರು ದಿನಗಳ ಮೊದಲು ಪೆನ್ ಡ್ರೈವ್ ಗಳನ್ನು ವಿತರಿಸಿದವರು ಯಾರು ಎಂಬುದನ್ನು ತನಿಖೆ ಮಾಡುವ ಅಗತ್ಯವಿದೆ ಎಂದು ಕುಮಾರಸ್ವಾಮಿ ಹೇಳಿದರು. ತಪ್ಪು ಮಾಡಿದವರು ಯಾರೇ ಆಗಲಿ ಶಿಕ್ಷೆ ಅನುಭವಿಸಲೇ ಬೇಕು ಎಂದು ಹೇಳಿದ್ದಾರೆ.