ಆನ್‌ಲೈನ್ ಸ್ಕ್ಯಾಮ್‌ನಿಂದ ಮೋಸ ಹೋಗದಿರಿ, ಬಚಾವ್ ಆಗಲು ಹೀಗೆ ಮಾಡಿ..

ಆನ್‌ಲೈನ್ ಸ್ಕ್ಯಾಮ್‌ಗಳಿಗೆ ಲೆಕ್ಕವೇ ಇಲ್ಲ, ಯಾರೂ ನಿರೀಕ್ಷಿಸದ ರೀತಿ ಸ್ಕ್ಯಾಮ್‌ಗಳು ನಡೆಯುತ್ತಿವೆ. ಲಕ್ಷಾಂತರ ಮಂದಿ ಹಣ ಕಳೆದುಕೊಂಡಿದ್ದಾರೆ. ಮೊಬೈಲ್ ಹೆಚ್ಚಾಗಿ ಬಳಕೆ ಮಾಡದ, ಅಥವಾ ಸೈಬರ್ ಬಗ್ಗೆ ಮಾಹಿತಿ ಇರದ ಎಷ್ಟೋ ಮಂದಿ ಬಂದ ಮೆಸೇಜ್‌ಗಳು, ಲಿಂಕ್‌ಗಳನ್ನು ಸುಲಭವಾಗಿ ನಂಬಿ ಮೋಸ ಹೋಗುತ್ತಾರೆ.
ಸೈಬರ್ ಸ್ಕ್ಯಾಮ್‌ನಿಂದ ಬಚಾವ್ ಆಗಲು ಇವುಗಳನ್ನು ನೆನಪಿಡಿ..

ಲಿಂಕ್ ಮೇಲೆ ಒತ್ತಬೇಡಿ: ನಿಮ್ಮ ಲ್ಯಾಪ್‌ಟಾಪ್ ಅಥವಾ ಮೊಬೈಲ್‌ನಲ್ಲಿ ನೀವೇನು ಕೆಲಸ ಮಾಡುತ್ತಿದ್ದೀರಿ? ಅದಕ್ಕೆ ಸಂಬಂಧ ಇಲ್ಲದ ಲಿಂಕ್‌ಗಳು ಪಾಪ್‌ಅಪ್ ಆದರೆ ಅವುಗಳ ಮೇಲೆ ಕ್ಲಿಕ್ ಮಾಡಬೇಡಿ. ಕ್ಯಾನ್ಸಲ್ ಬಟನ್ ಒತ್ತಿ.

ಪಾಸ್‌ವರ್ಡ್ ಬದಲಾಯಿಸಿ: ನೆನಪಿಡೋದಕ್ಕೆ ಕಷ್ಟ ಎಂದು ಒಂದೇ ಪಾಸ್‌ವರ್ಡ್ ಎಲ್ಲದಕ್ಕೂ ಇಡಬೇಡಿ. ಪ್ರತಿ ಸೈಟ್‌ಗೂ ಬೇರೆ ಬೇರೆ ಪಾಸ್‌ವರ್ಡ್ ಇರಲಿ.

ಇ-ಮೇಲ್ ಪಾಸ್‌ವರ್ಡ್ ಬಗ್ಗೆ ಗಮನ: ಒಮ್ಮೆ ನಿಮ್ಮ ಇ-ಮೇಲ್ ಪಾಸ್‌ವರ್ಡ್ ಹ್ಯಾಕರ‍್ಸ್‌ಗೆ ತಿಳಿದರೆ, ಸುಲಭವಾಗಿ ನಿಮ್ಮ ಎಲ್ಲ ಮಾಹಿತಿ ಅವರಿಗೆ ತಿಳಿಯುತ್ತದೆ.ಇ-ಮೇಲ್ ಪಾಸ್‌ವರ್ಡ್ ಎಲ್ಲಿಯೂ ಬಳಸಬೇಡಿ, ಗೆಸ್ ಮಾಡುವಂತ ಸುಲಭವಾದ ಪಾಸ್‌ವರ್ಡ್ ಬಳಕೆ ಬೇಡ.

ಆಂಟಿ ವೈರಸ್ ಸಾಫ್ಟ್‌ವೇರ್: ದೊಡ್ಡ ಮನೆಗೆ ವಾಚ್‌ಮೆನ್ ಇಲ್ಲದಿದ್ದರೆ ಹೇಗೆ? ಸೆಕ್ಯುರಿಟಿಗಾಗಿ ಆಂಟಿ ವೈರಸ್ ಸಾಫ್ಟ್‌ವೇರ್ ಅಳವಡಿಸಿ.

ಮೆಸೇಜ್‌ಗೆ ರಿಪ್ಲೇ ಮಾಡಬೇಡಿ: ನಿಮಗೆ ಲೋನ್ ಕೊಡ್ತೇವೆ, ಕರೆಂಟ್ ಬಿಲ್ ಕಟ್ಟಿಲ್ಲ ಕರೆಂಟ್ ತೆಗೆಯುತ್ತೇವೆ, ಹೀಗೆ ನೂರಾರು ರೀತಿ ಸ್ಕ್ಯಾಮ್ ಮೆಸೇಜ್‌ಗಳು ಬರುತ್ತವೆ. ಅದಕ್ಕೆ ರಿಪ್ಲೇ ಮಾಡಬೇಡಿ.

ಅನುಮಾನ ಬಂದರೆ ಬ್ಲಾಕ್ ಮಾಡಿ: ಯಾವುದೇ ಸಂದೇಶ ಅಥವಾ ಲಿಂಕ್ ಅಥವಾ ಇ-ಮೇಲ್ ಮೇಲೆ ಸಂದೇಶ ಬಂದರೆ ಅದನ್ನು ರಕ್ಷಣವೇ ಬ್ಲಾಕ್ ಮಾಡಿ.

ಗಮನ ಇರಲಿ: ಸಾಮಾಜಿಕ ಜಾಲತಾಣಗಳಲ್ಲಿ ನೀವು ಏನೆಲ್ಲಾ ಅಪ್‌ಲೋಡ್ ಮಾಡುತ್ತೀರಿ, ಯಾವ ಮಾಹಿತಿ ನೀಡುತ್ತೀರಿ ಎನ್ನುವುದರ ಬಗ್ಗೆ ಗಮನ ಇರಲಿ.

ಆನ್‌ಲೈನ್ ಶಾಪಿಂಗ್: ಸಿಕ್ಕಸಿಕ್ಕ ಸೈಟ್‌ಗಳಿಂದ ಶಾಪಿಂಗ್ ಮಾಡಬೇಡಿ. ನಂಬಿಕಸ್ಥ ಸೈಟ್‌ಗಳಿಂದ ಮಾತ್ರ ಶಾಪಿಂಗ್ ಮಾಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!