ಸೆಕ್ಯೂರಿಟಿ ಗಾರ್ಡ್ ಸಮಯೋಚಿತ ಕಾರ್ಯಕ್ಕೆ ಬೈಕ್‌ ಕಳ್ಳರು ಸೆರೆ: ವಿಡಿಯೋ ನೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಾಲಿಕೆ ಅಧಿಕಾರಿಗಳ ಸೋಗಿನಲ್ಲಿ ಅಪಾರ್ಟ್‌ಮೆಂಟ್‌ನ ಗೇಟ್ ತೆಗೆದುಕೊಂಡು ಒಳಗೆ ಬಂದ ಬಂದ ಇಬ್ಬರು ವ್ಯಕ್ತಿಗಳು ಅಲ್ಲಿಂದ ಬೈಕ್ ಕದ್ದು ಪರಾರಿಯಾಗಲು ಯತ್ನಿಸಿದರು. ಇದನ್ನರಿತು ಮಿಂಚಿನ ವೇಗದಲ್ಲಿ ಪ್ರತಿಕ್ರಿಯಿಸಿದ ಭದ್ರತಾ ಸಿಬ್ಬಂದಿ ತಕ್ಷಣ ಗೇಟ್ ಮುಚ್ಚಿದ್ದಾರೆ. ಇದರಿಂದ ಬೈಕ್‌ ಕಳ್ಳರಿಬ್ಬರು ಗೇಟ್‌ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾರೆ. ಬಳಿಕ ಸ್ಥಳೀಯರು ಬಂದು ಕಳ್ಳರನ್ನು ಹಿಡಿದು ಪೊಲೀಸರಿಗೊಪ್ಪಿಸಿದರು.

ಈ ಘಟನೆ ದಕ್ಷಿಣ ದೆಹಲಿಯ ಗೋವಿಂದಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಕಾಜಿ ಎಕ್ಸ್‌ಟೆನ್ಶನ್ ಎವರೆಸ್ಟ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಇಬ್ಬರು ಕಳ್ಳರು ಓಡಿ ಹೋಗುತ್ತಿರುವಾಗ ಭದ್ರತಾ ಸಿಬ್ಬಂದಿ ಗೇಟ್ ಮುಚ್ಚುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಪಾರ್ಟ್ಮೆಂಟ್ ನಲ್ಲಿರುವ ಮನೆಗೆ ಡೆಲಿವರಿ ಬಾಯ್ ಬಂದು ಬೈಕ್ ಲಾಕ್ ಮಾಡಲು ಮರೆತು ಹೋಗಿದ್ದು, ಕಳ್ಳರು ಅದನ್ನು ಸ್ಟಾರ್ಟ್ ಮಾಡಿ ಕಳ್ಳತನಕ್ಕೆ ಯತ್ನಿಸಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ. ಡೆಲಿವರಿ ಬಾಯ್ ತನ್ನ ಬೈಕ್ ಕಳ್ಳತನವಾಗಿದೆ ಎಂದು ಜೋರಾಗಿ ಕೂಗಿದ್ದನ್ನು ಕಂಡ ಭದ್ರತಾ ಸಿಬ್ಬಂದಿ ಗೇಟ್ ಮುಚ್ಚಿದ್ದಾರೆ. ಸೆಕ್ಯೂರಿಟಿ ಗಾರ್ಡ್‌ ಸಮಯೋಚಿತ ಕೆಲಸಕ್ಕೆ ಪ್ರಶಂಸೆಗಳ ಸುರಿಮಳೆ ವ್ಯಕ್ತವಾಗುತ್ತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!